ಪದಾರ್ಥಗಳು
ಚಿಕನ್ ಕ್ಯೂಬ್ಸ್ ( ರೆಡಿಮೇಡ್ ಮಸಾಲಾ ಕ್ಯೂಬ್ಸ್ ಅಥವ ಚಿಕನ್ ಮಸಾಲೆ)
4 ಟೇಬಲ್ ಸ್ಪೂನ್ ತುಪ್ಪ
2 ದಾಲ್ಚಿನ್ನಿ
6 ಲವಂಗಗಳು
3 ಚೆಚ್ಚಿದ ಏಲಕ್ಕಿ
ಸೋಂಪು – 1 ಟೀಚಮಚ
ಮೆಣಸಿನಕಾಯಿಗಳು
ಈರುಳ್ಳಿ
3 ಟೀಚಮಚ – ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಟೀಚಮಚ – ಖಾರದ ಪುಡಿ
ಅರಿಶಿನ ಪುಡಿ – 2 ಚಿಟುಕೆ
ಧನ್ಯಾ ಪುಡಿ
2 ಸಣ್ಣದಾಗಿ ಹೆಚ್ಚಿದ ಟೊಮೇಟೊ
500 ಗ್ರಾಂ – ಚಿಕನ್
ಅಕ್ಕಿ – ನಿಮ್ಮಿಷ್ಟದ್ದು
ಉಪ್ಪು
ಹೆಚ್ಚಿದ ಕೊತ್ತಂಬರಿ ಸೊಪ್ಪು
ಪುದೀನ ಸೊಪ್ಪು,
ಮಾಡುವ ವಿಧಾನ
ಕುಕ್ಕರ್ ನಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ದಾಲ್ಚಿನ್ನಿ, ಲವಂಗ, ಏಲಕ್ಕಿ, ಸೋಂಪು, ಸಂಪೂರ್ಣ , ಮೆಣಸು ಸೇರಿಸಿ. ನಂತರ, ಈರುಳ್ಳಿ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಬರುವ ವರೆಗೆ ಹುರಿಯಿರಿ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಕೊತ್ತಂಬರಿ ಪುಡಿ ಸೇರಿಸಿ. ಒಂದು ನಿಮಿಷ ಹುರಿಯಿರಿ.
ಟೊಮೇಟೊ ಹಾಕಿ ಚೆನ್ನಾಗಿ ಬೇಯುವವರೆಗೆ ಹುರಿಯಿರಿ. ನಂತರ, ಚಿಕನ್ ಪೀಸ್ ಗಳನ್ನ ಸೇರಿಸಿ ಮತ್ತು 5 ನಿಮಿಷಗಳ ಕಾಲ ಹುರಿಯಿರಿ.
ನೀರು, ಮತ್ತೆ ಚಿಕನ್ ಮಸಾಲಾ ಕ್ಯೂಬ್ಸ್ ಅಥವ ಮಸಾಲೆ ಪುಡಿ , ಪುದೀನ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ರುಚಿಗೆ ಉಪ್ಪು ಸೇರಿಸಿ. ನೀರು ಕುದಿಯಲು ಪ್ರಾರಂಭಿಸಿದಾಗ ಅಕ್ಕಿ ಸೇರಿಸಿ. ಮೀಡಿಯಮ್ ಲೋ ಫ್ಲೇಮ್ ನಲ್ಲಿಟ್ಟು ಕುಕ್ಕರ್ ಮುಚ್ಚಳ ಮುಚ್ಚಿ ಬೇಯಲು ಬಿಡಿ…








