Cooking Oil : ಅಡುಗೆ ಎಣ್ಣೆ ದರ ಇಳಿಕೆ

1 min read
Edible oil prices have been hiked saaksha tv

ಅಡುಗೆ ಎಣ್ಣೆ ದರ ಇಳಿಕೆ

ದರ ಇಳಿಸಿದ ಪ್ರಮುಖ ಬ್ರ್ಯಾಂಡ್‌ ಗಳು

ಪ್ರತಿ ಲೀಟರ್‌ಗೆ 10-15 ರೂ. ಇಳಿಕೆ

ಆಹಾರ ಸಚಿವಾಲಯದ ಮಾಹಿತಿ

ಜನಸಾಮಾನ್ಯರು ಫುಲ್ ಖುಷ್

ಅಡುಗೆ ಎಣ್ಣೆ , ಪೆಟ್ರೋಲ್ , ಗ್ಯಾಸ್ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿಹೋಗಿದ್ದ ಜನಸಾಮಾನ್ಯರಿಗೆ ಈಗ ಗುಡ್ ನ್ಯೂಸ್ ಒಂದು ಸಿಕ್ಕಿದೆ..

ಹೌದು..! ಅಡುಗೆ ಎಣ್ಣೆ ದರ ಇಳಿಕೆಯಾಗ್ತಿದೆ..   ಪ್ರಮುಖ ಬ್ರ್ಯಾಂಡ್‌ ಗಳು ಪ್ರತಿ ಲೀಟರ್‌ಗೆ 10-15 ರೂಪಾಯಿಗಳಷ್ಟು MRP ಕಡಿತಗೊಳಿಸುತ್ತಿವೆ..

ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಡಲೆಕಾಯಿ ಎಣ್ಣೆಯನ್ನು ಹೊರತುಪಡಿಸಿ ಅನೇಕ ಪ್ಯಾಕ್ಡ್ ಖಾದ್ಯ ತೈಲಗಳ ಸರಾಸರಿ ಚಿಲ್ಲರೆ ಬೆಲೆಗಳು ಈ ತಿಂಗಳ ಆರಂಭದಿಂದ ದೇಶಾದ್ಯಂತ ಸ್ವಲ್ಪ ಕಡಿಮೆಯಾಗಲಿದೆ.. ಪ್ರತಿ ಕೆಜಿಗೆ ರೂ. 150 ರಿಂದ 190 ರೂ ಆಗಲಿದೆ..

ಕಳೆದ ವಾರ, ಖಾದ್ಯ ತೈಲ ಸಂಸ್ಥೆಗಳಾದ ಅದಾನಿ ವಿಲ್ಮಾರ್ ಮತ್ತು ಮದರ್ ಡೈರಿ ವಿವಿಧ ಬಗೆಯ ಅಡುಗೆ ಎಣ್ಣೆಗಳ MRP (ಗರಿಷ್ಠ ಚಿಲ್ಲರೆ ಬೆಲೆ) ಅನ್ನು ಲೀಟರ್‌ಗೆ 10-15 ರೂ. ಕಡಿಮೆಯಾಗಿಸಿದ್ದಾಗೆ ತಿಳಿಸಿದ್ದರು.. ಹೊಸ MRPಗಳೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ಎರಡೂ ಕಂಪನಿಗಳು ತಿಳಿಸಿವೆ.

ಸರ್ಕಾರದ ಸಮಯೋಚಿತ ಮಧ್ಯಸ್ಥಿಕೆ ಮತ್ತು ಜಾಗತಿಕ ಬೆಳವಣಿಗೆಗಳಿಂದಾಗಿ ಖಾದ್ಯ ತೈಲಗಳ ಬೆಲೆಗಳಲ್ಲಿನ ಪ್ರವೃತ್ತಿಗಳು ತುಂಬಾ ಸಕಾರಾತ್ಮಕವಾಗಿವೆ ಹೇಳಲಾಗಿದೆ..

ಖಾದ್ಯ ತೈಲಗಳು ಮಾತ್ರವಲ್ಲ, ಚಿಲ್ಲರೆ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಗಳು ಸ್ಥಿರವಾಗಿವೆ, ದೇಶೀಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ನಿಯಮಗಳು ಉಪಯುಕ್ತವಾಗಿವೆ ಎಂದು ಹೇಳಲಾಗಿದೆ..

ಪ್ರಮುಖ ಖಾದ್ಯ ತೈಲ ಬ್ರಾಂಡ್‌ಗಳು ಎಂಆರ್‌ಪಿಯನ್ನು ಹಂತಹಂತವಾಗಿ ಇಳಿಸಿವೆ ಮತ್ತು ಇತ್ತೀಚೆಗಷ್ಟೇ ಪ್ರತಿ ಲೀಟರ್‌ಗೆ 10-15 ರೂಪಾಯಿಗಳಷ್ಟು ಬೆಲೆಯನ್ನು ಕಡಿತಗೊಳಿಸಿವೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಹಕ ವ್ಯವಹಾರಗಳ ಇಲಾಖೆಯು ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಶೇಂಗಾ ಎಣ್ಣೆಯ (ಪ್ಯಾಕೇಜ್ ಮಾಡಿದ) ಸರಾಸರಿ ಬೆಲೆಗಳು ಜೂನ್ 1 ರಂದು ಕೆಜಿಗೆ 186.43 ರಿಂದ ಜೂನ್ 21 ರಂದು 188.14 ರೂ.ಗೆ ಇಳಿಕೆಯಾಗಿದೆ…

ಸಾಸಿವೆ ಎಣ್ಣೆ ದರವು ಜೂನ್ 1 ರಂದು ಕೆಜಿಗೆ 183.68 ರಿಂದ ಜೂನ್ 21 ರಂದು 180.85 ರೂ.ಗೆ ಕಡಿಮೆಯಾಗಿದೆ. ವನಸ್ಪತಿ ಬೆಲೆ ಕೆಜಿಗೆ 165 ರೂ. ಆಗಿದೆ.

ಸೋಯಾ ಎಣ್ಣೆಯ ಬೆಲೆ 169.65 ರಿಂದ 167.67 ಕ್ಕೆ ಸ್ವಲ್ಪ ಕಡಿಮೆಯಾಗಿದೆ, ಆದರೆ ಸೂರ್ಯಕಾಂತಿ ಎಣ್ಣೆ ದರವು ಕೆಜಿಗೆ 193 ರಿಂದ 189.99 ಕ್ಕೆ ಸ್ವಲ್ಪ ಕುಸಿದಿದೆ.

ತಾಳೆ ಎಣ್ಣೆ ದರ ಜೂನ್ 1 ರಂದು ಕೆಜಿಗೆ 156.4 ರಿಂದ ಜೂನ್ 21 ರಂದು 152.52 ರೂ.ಗೆ ಇಳಿದಿದೆ.

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd