ರುಚಿಕರವಾಗಿ ಮಾಡಿ ಮಸಾಲಾ ಮೊಸರನ್ನ…!!!
ಅಕ್ಕಿ 1 ಕಪ್
ಮೊಸರು 2 ಕಪ್
ಉದ್ದಿನಬೇಳೆ 1ಚಮಚ
ಕಡ್ಲೆಬೇಳೆ 1ಚಮಚ
ಸಾಸಿವೆ 1/2 ಚಮಚ
ಸ್ವಲ್ಪ ಇಂಗು
ದಾಳಿಂಬೆ ಕಾಳು - 1 ಕಪ್
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 2
ಶುಂಠಿ 1/2 ಇಂಚು
ಚಿಕ್ಕದಾಗಿ ಕತ್ತರಿಸಿದ ಕರಿಬೇವು ಸ್ವಲ್ಪ
ಒಣಮೆಣಸು 2
ಎಣ್ಣೆ 2-3 ಚಮಚ
ಮೊದಲಿಗೆ ಒಂದು ಕಪ್ ಅಕ್ಕಿಯಿಂದ ಮೆತ್ತಗೆ ಅನ್ನ ಮಾಡಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಒಗ್ಗರಣೆ ಕೊಡಿ.
ಸಾಸಿವೆ ಸಿಡಿದ ಮೇಲೆ ಗೋಡಂಬಿ, ಒಣಮೆಣಸಿನಕಾಯಿ, ಕರಿಬೇವು, ಹಸಿ ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಸೇರಿಸಿ. ಬಳಿಕ ಗ್ಯಾಸ್ ಆಫ್ ಮಾಡಿ ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ದಾಳಿಂಬೆ ಕಾಳುಗಳನ್ನು ಸೇರಿಸಿ. ತಣ್ಣಗಾದ ಮೇಲೆ ಮೊಸರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ರುಚಿಯಾದ ಆರೋಗ್ಯಕರವಾದ ಮೊಸರನ್ನ ಸವಿಯಲು ಸಿದ್ಧ.









