Cooking : ವೆನಿಲ್ಲಾ ಮಿಲ್ಕ್ ಶೇಕ್ ( vanilla Milk Shake )
ಬೇಕಾಗಿರುವ ಪದಾರ್ಥಗಳು :
ಇಬ್ಬರಿಗೆ ಮಾಡಲು ಬೇಕಾದ ಪ್ರಮಾಣ..
ಹೆವಿ ಕ್ರೀಮ್ ಹಾಲು ( Cream Milk ) ½ ಲೀಟರ್
ಐಸ್ ಕ್ಯೂಬ್ ಗಳು ನಿಮಗೆ ಬೇಕಾದಷ್ಟು
ಸಕ್ಕರೆ ನಿಮ್ಮ ರುಚಿಗೆ ಅನುಸಾರ
ವೆನಿಲ್ಲಾ ಎಸಿನ್ಸ್ – 2 -3 ಟೀ ಸ್ಪೂನ್
ವೆನಿಲ್ಲಾ ಐಸ್ ಕ್ರೀಮ್ ( ಆಪ್ಷನಲ್ )
ಮಾಡುವ ವಿಧಾನ :
ಕಾಯಿಸಿ ಫ್ರಿಡ್ಜ್ ನಲ್ಲಿ ಇಡಲಾಗಿದ್ದು ಹಾಲು ಅಥವ ಹಾಲನ್ನ ಕಾಯಿಸಿ ಅದನ್ನ ಪೂರ್ತಿ ಆರಿಸಿದ ನಂತರ ಬಳಸಬಹುದು..
ಜ್ಯೂಸ್ ಮಿಕ್ಸರ್ ( ಜಾರ್ ) ಗೆ ಮೊದಲಿಗೆ ಹಾಲು ಹಾಕಿ… ಅದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿ , ಸಕ್ಕರೆ ಹಾಕಿ, ಒಂದು ಸ್ಪೂನ್ ವೆನಿಲ್ಲಾ ಐಸ್ ಕ್ರೀಮ್ ಬೇಕಿದ್ದಲ್ಲಿ ಸೇರಿಸಿ.. ನಂತರ ಅರ್ಧ ಐಸ್ ಕ್ಯೂಬ್ ಗಳನ್ನ ಹಾಕಿಕೊಳ್ಳಿ ,,,, ಚೆನ್ನಾಗಿ ಗ್ರೈಂಡ್ ಮಾಡಿ ,,,, ನಂತರ ಲೋಟಕ್ಕೆ ಹಾಕಿ. ಅದಕ್ಕೆ ನಿಮಗೆ ಬೇಕಾದರೆ ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್ ಸೇರಿಸಿಕೊಳ್ಳಿ , ಬೇಡದೇ ಇದ್ದಲ್ಲಿ ಅದಕ್ಕೆ ಐಸ್ ಕ್ಯೂಬ್ಸ್ ಬೇಕಿದ್ರೂ ಸೇರಿಸಿಕೊಳ್ಳಬಹುದು. ಬೇಕಿದ್ದರೆ ಹರ್ಶೀಸ್ ಸಿರಪ್ ಅನ್ನ ಮೊದಲಿಗೆ ಲೋಟಕ್ಕೆ ಹಾಕಿಕೊಳ್ಳಬಹುದು… ಬೇಕಿದ್ದರೆ ಡ್ರೈಫ್ರೂಟ್ಸ್ ಅಥವ ಗುಲ್ಕನ್ ಕೂಡ ಸೇರಿಸಿಕೊಳ್ಳಿ. ಬಿಸಿಲಿನ ಹೊತ್ತಲ್ಲಿ ಇದು ರಿಫ್ರೆಶಿಂಗ್ ಆಗಿಯೂ ಇರುತ್ತೆ.. ಐಸ್ ಕ್ರೀಮ್ ಜೊತೆಗೆ ಜ್ಯೂಸ್ ಎರೆಡೂ ಬೇಕೆನಿಸುವವರಿಗೂ ಉತ್ತಮ ಆಪ್ಷನ್ ಜೊತೆಗೆ ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ..