“100 ಕೋಟಿ ಮೊತ್ತದ ಲಸಿಕೆ ತರಿಸಲು ಕಾಂಗ್ರೆಸ್ ಗೆ ಸಹಕರಿಸಿ”
ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿರುವುದರಿಂದ ನಮ್ಮ ಪಕ್ಷದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಲಸಿಕೆ ಖರೀದಿಸಿ, ಜನರಿಗೆ ನೀಡಲು ನಿರ್ಧರಿಸಿದ್ದೇವೆ.
ಈ ನಮ್ಮ ಕಾರ್ಯಕ್ಕೆ ಸರ್ಕಾರ ಸಹಕರಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಜಗತ್ತಿನಲ್ಲಿ ಮತ್ತು ದೇಶದಲ್ಲಿ ಯಾರ್ಯಾರು ಕೊರೊನಾ ರೋಗದ ವಿರುದ್ಧ ಲಸಿಕೆ ಪಡೆದಿದ್ದಾರೋ ಅವರಲ್ಲಿ, ರೋಗ ಹರಡುವಿಕೆ ಹಾಗೂ ಮರಣ ಪ್ರಮಾಣ ಕಡಿಮೆ ಆಗಿದೆ ಎನ್ನುವುದು ಸಾಬೀತಾಗಿದೆ.
ಲಸಿಕೆ ಒದಗಿಸಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನು ಜನರಿಗೆ ನೀಡುವ ಜವಾಬ್ದಾರರು. ಆದ್ರೆ ರಾಜ್ಯದಲ್ಲಿ ಲಸಿಕೆ ಅಭಾವದಿಂದ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿರುವುದರಿಂದ ನಮ್ಮ ಪಕ್ಷದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಸಿ, ಜನರಿಗೆ ನೀಡಲು ನಿರ್ಧರಿಸಿದ್ದೇವೆ. ಈ ನಮ್ಮ ಕಾರ್ಯಕ್ಕೆ ಸರ್ಕಾರ ಸಹಕರಿಸಬೇಕು ಎಂದು @CMofKarnataka ಅವರನ್ನು ಕೋರುತ್ತೇನೆ.#LetCongressVaccinate pic.twitter.com/TwCcvcAFmJ
— Siddaramaiah (@siddaramaiah) May 25, 2021
ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕನಾಗಿರುವ ನಾನು ಮತ್ತು ಪಕ್ಷದ ಮುಖಂಡರು ಚರ್ಚಿಸಿ ನಮ್ಮ ಶಾಸಕರಿಗೆ ಬರುವ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಒಂದು ನೂರು ಕೋಟಿ ರೂಪಾಯಿಯನ್ನು ಲಸಿಕೆ ಖರೀದಿಗೆ ವಿನಿಯೋಗಿಸಲು ತೀರ್ಮಾನಿಸಿದ್ದೇವೆ.
ಹಾಗೂ ಇದಕ್ಕೆ ಎಲ್ಲಾ ಶಾಸಕರು ಒಪ್ಪಿಕೊಂಡಿದ್ದಾರೆ. ಸಂಗ್ರಹವಾಗಿರುವ ನೂರು ಕೋಟಿಯನ್ನು ವಿನಿಯೋಗಿಸಿ ಲಸಿಕೆ ತರಿಸಿ ಜನರಿಗೆ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.
ಇದಕ್ಕೆ ಜನರ ಹಾಗೂ ಸರ್ಕಾರದ ಸಹಕಾರ ಬೇಕು ಎಂದು ಕೋರುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.







