ರಾಜ್ಯಕ್ಕೆ ಅಪ್ಪಳಿಸಿದ ಕೊರೊನಾ ಸುನಾಮಿ : ಒಂದೇ ‌ದಿನ‌ 1267 ಮಂದಿಗೆ ಕೊರೊನಾ ದೃಢ

ಬೆಂಗಳೂರು: ಕರ್ನಾಟಕದ ಜನರ ಪಾಲಿಗೆ ಇಂದು ಕರಾಳ ಭಾನುವಾರ. ಮಹಾಮಾರಿ ಕೊರೊನಾ ಒಂದೇ ದಿನ 1267 ಮಂದಿಯ ದೇಹ ಹೊಕ್ಕಿದೆ.
ಹಿಂದೆಂದೂ ಕಾಣದ ಈ ಕೊರೊನಾ ಸುನಾಮಿಗೆ ರಾಜ್ಯದ ಜನರು ಕೊಚ್ಚಿ ಹೋಗಿದ್ದಾರೆ.
ಇದೇ ಮೊದಲ ಬಾರಿಗೆ ಇಂದು 16 ಮಂದಿಯನ್ನು ಕೊರೊನಾ ಕೊಂದು ಹಾಕಿ ಕೊಲೆ ಪಾತಕ ಪಟ್ಟಿ ಹೊತ್ತುಕೊಂಡಿದೆ.
ಇಂದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನೋಡಿದರೆ ಕರ್ನಾಟಕ ಅಪಾಯದ ಅಂಚಿಗೆ ಹೋಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ರಾಜ್ಯದಲ್ಲಿ ಇಂದಿನ 1267 ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ ,13190ಕ್ಕೆ ಏರಿಕೆಯಾಗಿದೆ. ಇಂದು 220 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.ಬೆಂಗಳೂರಿಗೆ ಅಪಾಯದ ಗಂಟೆ..!
ಹೌದು, ರಾಜಧಾನಿ ಬೆಂಗಳೂರಿಗರ ಪಾಲಿಗೆ ಇಂದು ಚಳಿಯಲ್ಲೂ ಬೆಚ್ಚಿ ಬೀಳುವ ದಿನ.
ನಿನ್ನೆಯ ನಾಗಾಲೋಟ ಹಿಂದಿಕ್ಕಿ ಮತ್ತೊಂದು ದಾಖಲೆ ಬರೆದಿರುವ ಮಹಾಮಾರಿ ಕೊರೊನಾ 783 ಮಂದಿಗೆ ವಕ್ಕರಿಸಿದ್ದು ಅಪಾಯದ ಗಂಟೆ ಬಾರಿಸಿದೆ.
ಲಾಕ್ ಡೌನ್ ಸಡಿಲಗೊಂಡ ನಂತರ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ದಿನಗಳಲ್ಲಿ ಕೊರೊನಾ ಸುನಾಮಿ ಸಿಲಿಕಾನ್ ಸಿಟಿ ಜನರ ನಿದ್ದೆ ಕೆಡುವಂತೆ ಮಾಡಿದೆ.
ಸಿಕ್ಕ ಸಿಕ್ಕವರಿಗೆಲ್ಲಾ ಕೊರೊನಾ ವಕ್ಕರಿಸಿದೆ.
ಜೆ.ಜೆ ನಗರ ಕಾರ್ಪೋರೇಟರ್ , ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಓರ್ವ ಎಎಸ್ ಐ ಸೇರಿದಂತೆ ನಾಲ್ಕು ಮಂದಿ ಕೊರೊನಾಗೆ ಉಸಿರು ಚೆಲ್ಲಿದ್ದಾರೆ.
ಬೆಂಗಳೂರು ನಂತರ
ದಕ್ಷಿಣ ಕನ್ನಡ 97
ಬಳ್ಳಾರಿ 71
ಉಡುಪಿ 40
ಕಲಬುರಗಿ 34
ಹಾಸನ 31
ಗದಗ 30
ಬೆಂಗಳೂರು ಗ್ರಾಮಾಂತರ 27
ಧಾರವಾಡ 18
ಮೈಸೂರು28 ಪ್ರಕರಣ ದಾಖಲಾದ ಪ್ರಮುಖ ಜಿಲ್ಲೆಗಳು

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This