ಕೊರೊನಾ 2.0 ಹೊಸ ರೂಲ್ಸ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ಅಬ್ಬರ ಜೋರಾಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿವೆ. ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಮುಂದುವರಿದೆ. ಈ ಹಿನ್ನೆಲೆ ಇಂದು ಆರೋಗ್ಯ ಸಚಿವರು ತಜ್ಞರ ಜೊತೆ ಸಭೆ ನಡೆಸಿದರು. ಈ ವೇಳೆ ತಜ್ಞರು ಒಂದಿಷ್ಟು ಸಲಹೆಗಳನ್ನ ನೀಡಿದ್ದಾರೆ..
ಅವು ಹೀಗಿವೆ :
ಸೋಂಕಿತರ ಕೈಗೆ ಮತ್ತೆ ಸೀಲ್ ಹಾಕುವುದು.
ಐಸೋಲೇಷನ್ ನಲ್ಲಿ ಇರುವವರಿಗೂ ಸೀಲ್ ಕಡ್ಡಾಯ.
ಹೊರರಾಜ್ಯದಿಂದ ಬರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯ.
ಅಪಾರ್ಟ್ ಮೆಂಟ್ ಗಳಿಗೆ ಹೊಸ ರೂಲ್ಸ್ ಗೆ ಚಿಂತನೆ.
ಮಾರ್ಷಲ್ ಗಳು ಬಸ್ ನಿಲ್ದಾಣ, ರೈಲ್ವೆ, ಮದುವೆ ಮಂಟಪಗಳಿಗೂ ಭೇಟಿ.
ಮದುವೆ, ಕಾರ್ಯಕ್ರಮಗಳ ಆಯೋಜನಕರು ನಿಯಮ ಪಾಲಿಸದಿದ್ದರೆ ದಂಡ.
ಒಂದು ಮದುವೆ, ಕಾರ್ಯಕ್ರಮಕ್ಕೆ 500 ಅತಿಥಿಗಳು ಮಾತ್ರ ಸೀಮಿತ.
ಯಾವುದೇ ಕಾರಣಕ್ಕೆ ಅತಿಥಿ ಸಂಖ್ಯೆ ಹೆಚ್ಚಳ ಮಾಡುವಂತಿಲ್ಲ.
ಕ್ಲೋಸ್ ಡೋರ್ ನಲ್ಲಿ 200 ಜನಕ್ಕೆ ಅವಕಾಶ, ಓಪನ್ ಸ್ಪೇಸ್ ನಲ್ಲಿ 500 ಜನಕ್ಕೆ ಮಾತ್ರ ಅವಕಾಶ.
ಪ್ರತಿ ಆಸ್ಪತ್ರೆಗೆ ವಿಶೇಷ ನೋಡೆಲ್ ಆಫೀಸರ್ ನಿಯೋಜನೆ ಮಾಡುವುದು.
ಕೋವಿಡ್ ಬಂದ ವ್ಯಕ್ತಿಯಿಂದ 20 ಜನ ಪ್ರಾಥಮಿಕ ಸಂಪರ್ಕಿತರ ಪಟ್ಟಿ ಸಿದ್ಧ ಆಗಲೇಬೇಕು.
ಕಾಂಪ್ಲೆಕ್ಸ್ ,ಅಪಾರ್ಟ್ ಮೆಂಟ್, ರೆಸಿಡೆನ್ಸ್ ಭಾಗಗಳಿಗೆ ಔಷಧಿ ಸಿಂಪಡನೆ.
ಇದಲ್ಲದೆ ಏಪ್ರಿಲ್ 1 ರಿಂದ ಕೊರೊನಾ ತಡೆಯಲು ಹೊಸ ರೂಲ್ಸ್ ತರಲಾಗುತ್ತಿದ್ದು, ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.