Corona ಕೊರೊನಾ ಬ್ರೇಕ್ ಫೇಲ್ಯೂರ್ : ದೇಶದಲ್ಲಿ ನಿನ್ನೆ 1,45,384 ಕೇಸ್ ಪತ್ತೆ
ನವದೆಹಲಿ : ದೇಶದಲ್ಲಿ ಕೊರೊನಾ ಬ್ರೇಕ್ ಫೇಲ್ಯೂರ್ ಆಗಿದ್ದು, ಪ್ರತಿದಿನ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.
ಈಗಾಗಲೇ ದಿನವೊಂದರಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳ ಪೈಕಿ ಅಮೆರಿಕವನ್ನ ಹಿಂದಿಕ್ಕಿರುವ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 1,45,384 ಸೋಂಕಿತರು ಪತ್ತೆಯಾಗಿದ್ದರೇ 794 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 1,32,05,926 ಏರಿಕೆಯಾಗಿದ್ದರೇ ಹೆಮ್ಮಾರಿಗೆ ಕೊನೆಯುಸಿರೆಳೆದಿರುವವ ಸಂಖ್ಯೆ 1,68,436ಕ್ಕೆ ಏರಿಕೆಯಾಗಿದೆ.
ಇನ್ನು ದೇಶದಲ್ಲಿನ್ನೂ 10,46,631 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ದೇಶದಲ್ಲಿ ಈವರೆಗೂ 1,19,90,859 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.