ರಾಯಚೂರು: ರಾಯಚೂರಿನಲ್ಲಿ ಕೊರೊನ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಒಟ್ಟು 266 ಕೊರೊನಾ ಪಾಸಿಟಿವ್ ಕೇಸ್ ಗಳು ಬೆಳಕಿಗೆ ಬಂದಿದ್ದು, ರಾಯಚೂರು ತಾಲ್ಲೂಕಿನಲ್ಲೇ 137 ಪ್ರಕರಣಗಳು ಪತ್ತೆಯಾಗಿವೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆಯಷ್ಟೇ ಶತಕದಷ್ಟಿದ್ದು ಸೋಂಕಿತರ ಸಂಖ್ಯೆ ಇಂದು ದ್ವಿಶತಕಕ್ಕೆ ಏರಿದೆ. ರಾಯಚೂರ ನಗರದಲ್ಲೇ ಸೋಂಕು ಹೆಚ್ಚುತ್ತಿದ್ದು ಜನರ ಆತಂಕವನ್ನು ಹೆಚ್ಚಿಸಿದೆ. ನಿನ್ನೆಯ ವರದಿಯಲ್ಲಿ 135 ಸೋಂಕಿನಲ್ಲಿ 90 ರಷ್ಟು ನಗರ ಪ್ರದೇಶದ್ದಾಗಿತ್ತು. ಇದೀಗ ಪತ್ತೆಯಾಗಿರುವ 267 ಸೋಂಕಿತರ ಪೈಕಿ 137 ಸೋಂಕಿತರು ರಾಯಚೂರು ತಾಲ್ಲೂಕಿನವರೇ ಆಗಿದ್ದಾರೆ. ಒಟ್ಟು ತಪಾಸಣೆ ಮಾಡಿದ 1136 ಮಾದರಿಗಳಲ್ಲಿ 266 ಜನರಿಗೆ ಸೋಕು ದೃಢವಾಗಿದೆ.
ಸೋತರೂ ಬಗ್ಗದ ಸ್ಟಾಲಿನ್ ಪುತ್ರ: ವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಸನಾತನ ಧರ್ಮದ ವಿರುದ್ಧ ಉದಯನಿಧಿ ಗುಡುಗು!
ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಬೆರಗುಗೊಳಿಸಿದೆ. ಭದ್ರಕೋಟೆಯಂತಿದ್ದ ಡಿಎಂಕೆ ಪಕ್ಷವು ಹೀನಾಯ ಸೋಲನ್ನನುಭವಿಸಿ ಅಧಿಕಾರ ಕಳೆದುಕೊಂಡಿದ್ದರೂ, ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್...








