ವಿಶ್ವದ ದೊಡ್ಡಣ್ಣ ಅಮೆರಿಕಾ ಕೊರೊನಾ ಹಾವಳಿಯಿಂದ ತತ್ತರಿಸಿಹೋಗಿದೆ. ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳದಲ್ಲಿ ಕೊರೊನಾ ಅಗ್ರಸ್ಥಾನದಲ್ಲಿದ್ದು, ಇನ್ನೂವರೆಗೂ 21.94 ಲಕ್ಷ ಸಕ್ರಿ ಕೇಸ್‍ಗಳಿವೆ ಎಂಬ ಮಾಹಿತಿ ಬಹಿರಂಗವಾಗಿದೆ. ಅಮೆರಿಕಾದಲ್ಲಿ ಈವರೆಗೂ 1,53,840 ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ ಬರೋಬ್ಬರಿ 46,34,985ಕ್ಕೆ ಏರಿಕೆಯಾಗಿದ್ರೆ, ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ. ಇನ್ನೂ ಇಲ್ಲಿಯವರೆಗೂ 22,84,965 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ 21,94, 735 ಸಕ್ರಿಯ ಪ್ರಕರಣಗಳಿವೆ. ಇನ್ನೂ ಈ ಅಂಕಿ ಅಂಶದ ಮೂಲಕ ಅಮೆರಿಕಾ ಕೊರೊನಾ ಸೋಂಕಿತರೂ ಹಾಗೂ ಮೃತರ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ.
ಮತ್ತೆ ಸ್ಫೋಟಗೊಳ್ಳುತ್ತಿದೆ ಜ್ವಾಲಾಮುಖಿ
ವಿಶ್ವದ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿರು ಕಿಲೌಯಾವು ಬುಧವಾರ ಸ್ಫೋಟಗೊಳ್ಳಲು ಆರಂಭಿಸಿದೆ. ದೊಡ್ಡ ದ್ವೀಪದಲ್ಲಿ ಹೊಳೆಯುವ ಅದ್ಭುತವಾದ ಲಾವಾದ ಕಾರಂಜಿಗಳನ್ನು ಸೃಷ್ಟಿಸುತ್ತಿದೆ. ಅಮೆರಿಕ ಜಿಯೋಲಾಜಿಕಲ್ ಸರ್ವೇಯ ಹವಾಯಿಯನ್ ಜ್ವಾಲಾಮುಖಿ...