ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸ್ಫೋಟವಾಗಿದೆ. ಒಂದೇ ದಿನದಲ್ಲಿ 52,972 ಹೊಸ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಒಂದೇ ದಿನ 771 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,03,696ಕ್ಕೆ ಏರಿಕೆಯಾಗಿದ್ದು, 38,135 ಮಂದಿ ಮಹಮಾರಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಗುಣಮುಖರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 11,86,203ರ ಗಡಿ ತಲುಪಿದೆ. ಇನ್ನೂ ಈವರೆಗೂ ದೇಶದಲ್ಲಿ ಒಟ್ಟು 5,79,357 ಸಕ್ರಿಯ ಕೇಸ್ ಗಳಿರುವುದು ಆತಂಕಕಾರಿ ಸಂಗತಿಯಾಗಿದೆ. ದಿನೇ ದಿನೇ ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆಯುತ್ತಲೇ ಇದ್ದು, ಶರವೇಗದಲ್ಲಿ ಕೇಸ್ ಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ವಿಶ್ವದಲ್ಲೇ ಕೊರೊನಾ ಹಾವಳಿ ಹೆಚ್ಚಾಗಿರುವ ದೇಶಗಳಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾ ಅಗ್ರ ಸ್ಥಾನದಲ್ಲಿದೆ. ನಂತರದ ಸಥಾನದಲ್ಲಿ ಬ್ರೆಜಿಲ್ ಇದ್ದು, ಭಾರತ ಮೂರನೇ ಸ್ಥಾನದಲ್ಲಿದೆ. ತದನಂತರದಲ್ಲಿ ರಷ್ಯಾ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
WPL 2023 Final : ಫೈನಲ್ ಪಂದ್ಯದ ಕಾದಾಟಕ್ಕೆ ಮುಂಬೈ, ದೆಹಲಿ ಸಜ್ಜು….
WPL 2023 Final : ಫೈನಲ್ ಪಂದ್ಯದ ಕಾದಾಟಕ್ಕೆ ಮುಂಬೈ, ದೆಹಲಿ ಸಜ್ಜು…. ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಸೀಸನ್ ನ ಮೊದಲ ಪೈನಲ್ ಪಂದ್ಯಕ್ಕೆ ಮುಂಬೈನ...