Corona : ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ – 10 ಸಾವಿರ ಪ್ರಕರಣ ವರದಿ..
ಚೀನಾದಲ್ಲಿ ಕೊರೊನಾ ಮತ್ತೆ ಅಬ್ಬರಿಸುತ್ತಿದೆ. ಶುಕ್ರವಾರವೊಂದರಲ್ಲೇ 10,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ರೋಗ ಲಕ್ಷಣಗಳಿಲ್ಲದಿದ್ದರೂ ಅನೇಕರು ಕರೋನಾ ಪರೀಕ್ಷೆಯಲ್ಲಿ ಪಸಿಟೀವ್ ಗೆ ತುತ್ತಾಗುತ್ತಿದ್ದಾರೆ.
ಬೀಜಿಂಗ್‌ನಲ್ಲಿ 118 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ನಗರದ ಹಲವು ಅಂಗಡಿ, ಮಳಿಗೆ, ಉದ್ಯಾನವನಗಳನ್ನ ಕ್ಲೋಸ್ ಮಾಡಲಾಗಿದೆ. ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ‘ಝೀರೋ ಕೋವಿಡ್’ ಹೆಸರಿನಲ್ಲಿ, ಕಟ್ಟುನಿಟ್ಟಾದ ಲಾಕ್‌ಡೌನ್‌ನಿಂದ ಜನರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಗುವಾಂಗ್‌ಝೌ ಮತ್ತು ಚಾಂಗ್‌ಕಿಂಗ್ ನಗರಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಲಾಕ್‌ಡೌನ್‌ನಲ್ಲಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳ ಹೊರತಾಗಿಯೂ ಚೀನಾ ತನ್ನ ಕಟ್ಟುನಿಟ್ಟಾದ ಶೂನ್ಯ-ಕೋವಿಡ್ ನೀತಿಯನ್ನು ಸಡಿಲಿಸಲು ಪ್ರಾರಂಭಿಸಿದೆ. ದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರ ಕ್ವಾರಂಟೈನ್ ಅವಧಿಯನ್ನು ಕಡಿಮೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಕ್ಸಿ ಜಿನ್‌ಪಿಂಗ್ ನೇತೃತ್ವದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ)ಯ ಏಳು ಸದಸ್ಯರ ಸ್ಥಾಯಿ ಸಮಿತಿಯು ಗುರುವಾರ ಸಭೆ ಸೇರಿತು. ನಂತರ ಹೊಸ ನಿಯಮಗಳನ್ನು ಪ್ರಕಟಿಸಲಾಯಿತು.
Corona: Corona outbreak again in China – 10 thousand case report..