1 ಕೋಟಿ ಗಡಿ ದಾಟಿದ ಕೊರೊನಾ: ಜಗತ್ತಿಗೆ ಎಚ್ಚರಿಕೆ ಗಂಟೆನಾ..!

ನವದೆಹಲಿ: ಕೊರೊನಾ ಆರ್ಭಟಕ್ಕೆ ಇಡೀ ಜಗತ್ತು ತತ್ತರಿಸಿ ಹೋಗಿದ್ದು, ಸೋಂಕಿತರ ಸಂಖ್ಯೆ 1 ಕೋಟಿ ದಾಟಿದೆ.
ಇದರಲ್ಲಿ ಶೇ.50ರಷ್ಟು ಪ್ರಕರಣ ಯುರೋಪ್ ಮತ್ತು ಅಮೆರಿಕದಲ್ಲಿಯೇ ದಾಖಲಾಗಿದ್ದರೆ, ಸಾವಿನ ಸಂಖ್ಯೆ ಕೂಡಾ 5 ಲಕ್ಷ ದಾಟಿದೆ.
ವಲ್ರ್ಡೋ ಮೀಟರ್ ಪ್ರಕಾರ, ಇದುವರೆಗೂ 1,01,10,117 ಸೋಂಕಿತರು ಜಗತ್ತಿನಾದ್ಯಂತ ಕಂಡುಬಂದಿದ್ದು, ಕೊರೊನಾ ಸಾವಿನ ಸಂಖ್ಯೆ 5,01,878ಕ್ಕೆ ಏರಿದೆ. 54,82,050 ಜನ ಗುಣಮುಖರಾಗಿದ್ದಾರೆ.

ಯುರೋಪ್‍ನಲ್ಲಿ 26,37,546 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿದ್ದು, 1,95,975 ಜನ ಸಾವನ್ನಪ್ಪಿದ್ದಾರೆ. ಇನ್ನು, ಅಮೆರಿಕದಲ್ಲಿ 25, 10,323 ಕೊರೊನಾ ಸೋಂಕಿತರು ಕಂಡುಬಂದಿದ್ದು, 1,25,539 ಜನ ಬಲಿಯಾಗಿದ್ದಾರೆ.
ಕಳೆದ 6 ದಿನಗಳಲ್ಲಿಯೇ 10 ಲಕ್ಷ ಸೋಂಕಿತರು ವಿಶ್ವದಾದ್ಯಂತ ಕಂಡು ಬಂದಿರುವುದು ಕೊರೊನಾದ ಭೀಕರತೆಯನ್ನು ತೋರಿಸುತ್ತಿದೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷದ 30 ಸಾವಿರಕ್ಕೆ ಏರಿದ್ದು, ಸಾವಿನ ಸಂಖ್ಯೆ 16 ಸಾವಿರ ಮೀರಿದೆ. ಜೊತೆಗೆ 3 ಲಕ್ಷದ 11 ಸಾವಿರಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 25,10,323 ಪಾಸಿಟಿವ್ ಕೇಸ್‍ಗಳೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 13, ಲಕ್ಷದ 15,941 ಸೋಂಕಿತರೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಇನ್ನು, ರಷ್ಯಾ 6 ಲಕ್ಷದ 34,437 ಹಾಗೂ ಭಾರತ 5 ಲಕ್ಷದ 30,993 ಸೋಂಕಿತರೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಹೊಂದಿವೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This