ಕೊರೊನಾ ತಡೆಗೆ ಕಠಿಣ ಕ್ರಮ.
ಮನೆಯಿಂದ ಹೊರ ಬಂದ್ರೆ ಜೈಲು ಫಿಕ್ಸ್.
ಸೋಂಕಿತರೇ ಎಚ್ಚರ.
ಕೊರೊನಾ …ಕೊರೊನಾ..ಕೊರೊನಾ ಸದ್ಯ ದೇಶ, ವಿದೇಶದ ಜನರನ್ನ ಕೊರೊನಾ ಮಹಾಮಾರಿ ಕಾಡುತ್ತಿದೆ. ಹಾಗಾಗಿ ಇಡಿ ವಿಶ್ವವೇ ಕೊನೊರಾ ವಿರುದ್ಧ ಹೋರಾಟ ನಡೆಸುತ್ತಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಭಾರತ ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿದೆ. ಜೊತೆಗೆ ಸರ್ಕಾರ ನೀಡಿದ ಮಾರ್ಗಸೂಚಿ ಮತ್ತು ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಕೊರೊನಾ ಸೋಂಕು ಶಂಕಿತರು ಗೃಹ ದಿಗ್ಬಂಧನದಲ್ಲಿ ಇರಬೇಕು. ಒಂದು ವೇಳೆ ನಿಯಮ ಮೀರಿ ಮನೆಯಿಂದ ಹೊರ ಬಂದರೆ, ಅಂತವರಿಗೆ ಆರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಗೃಹ ಬಂಧನದಿಂದ ಹೊರ ಬರುವ ಸೋಂಕಿತರನ್ನು ಬಂಧಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಕೊರೊನಾ ವೈರಸ್ ತಡೆಯಬೇಕಾದರೇ ಗೃಹ ದಿಗ್ಬಂಧನ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಅನಿವಾರ್ಯ ಎಂದು ಆರೋಗ್ಯ ಸಚಿವಾಲಯದ ಅಧಿಕಾರಯೊಬ್ಬರು ತಿಳಿಸಿದ್ದಾರೆ.
ವಿಪತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್ 10 ಮತ್ತು ಸಾಂಕ್ರಾಮಿಕ ರೋಗ ಸೆಕ್ಷನ್ 10 ರ ಅನ್ವಯ ಆರು ತಿಂಗಳು ಜೈಲು ಹಾಗೂ ಒಂದು ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು. ಈ ಕಾನೂನು ಅವಕಾಶವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಲು ಮುಂದಾಗಿದೆ. ರಾಜ್ಯ ಸರ್ಕಾರಗಳು ಸಹ ಈ ಕಾನೂನು ಬಳಸಿಕೊಳ್ಳುವಂತೆ ಸೂಚಿಸಿ ಪತ್ರ ಬರೆಯಲಾಗಿದೆ. ಸೋಂಕಿತರು ಗೃಹ ದಿಗ್ಬಂಧನವನ್ನು ಪಾಲಿಸದೇ ಇರುವ ಕಾರಣಕ್ಕಾಗಿ ಈ ಕ್ರಮ ಜಾರಿ ಮಾಡಲು ಸರ್ಕಾರಗಳು ಮುಂದಾಗಿವೆ ಎಂದು ಮೂಲಗಳು ಹೇಳಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ ದೇಶದಲ್ಲಿ 223 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಸೋಂಕಿತರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ 6700 ಜನರ ಮೇಲೆ ನಿಗಾ ಇಡಲಾಗಿದೆ. 1.12 ಲಕ್ಷ ಜನರ ಸಮುದಾಯ ಸರ್ವೇಕ್ಷಣೆ ನಡೆಸಲಾಗುತ್ತಿದೆ. 15 ಸಾವಿರಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನ ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತತ ಕಾಪಾಡುವುದು ಅಗತ್ಯು ಎಂದು ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲಾಲ್ ಅಗರ್ ವಾಲ್ ತಿಳಿಸಿದ್ದಾರೆ.