ಕೊರೊನಾ ವೈರಸ್ ಗೆ ಚೀನಾ ಸೇರಿದಂತೆ ಹಲವು ರಾಷ್ಟçಗಳು ತತ್ತರಿಸಿ ಹೋಗಿವೆ. ಇದೀಗ ಈ ವೈರಸ್ ಎಫೆಕ್ಟ್ ಸೂರತ್ ನ ವಜ್ರ ಉದ್ಯಮಕ್ಕೂ ತಟ್ಟುವ ಸಾಧ್ಯತೆಗಳಿವೆ. ಕೊರೊನಾದಿಂದಾಗಿ ಮುಂದಿನ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನ ರದ್ದಾಗುವ ಸಾಧ್ಯತೆಗಳಿವೆ. ಹಾಗೇನಾದ್ರು ಆಗಿದ್ದಲ್ಲಿ ಸೂರತ್ನ ವಜ್ರ ಉದ್ಯಮಕ್ಕೆ ಸುಮಾರು ೮,೦೦೦ ಕೋಟಿಯಷ್ಟು ನಷ್ಟವಾಗುವ ಭೀತಿ ಎದುರಾಗಿದೆ. ಸೂರತ್ ವಜ್ರ ಉದ್ಯಮಕ್ಕೆ ಹಾಂಕಾAಗ್ ಒಂದು ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಆದರೆ ಏಕಾಏಕಿ ಕೊರೊನಾವೈರಸ್ ಭೀತಿ ಎಲ್ಲೆಡೆ ಹರಡಿದ್ದು, ವ್ಯಾಪಾರ-ವಹಿವಾಟು ಮೇಲೂ ಪರಿಣಾಮ ಬೀರಿದೆ.
ಸೂರತ್ಯಿಂದ ಹಾಂಕಾಂಗ್ ಗೆ ಪ್ರತಿವರ್ಷ ೫೦,೦೦೦ ಕೋಟಿ ರುಪಾಯಿ ಮೌಲ್ಯದ ವಜ್ರಗಳನ್ನು ರಫ್ತು ಮಾಡಲಾಗುತ್ತದೆ. ಈಗ, ಕೊರೊನಾವೈರಸ್ ಹೆದರಿಕೆಯಿಂದಾಗಿ, ಹಾಂಗ್ ಕಾಂಗ್ ಒಂದು ತಿಂಗಳ ರಜೆಯನ್ನು ಘೋಷಿಸಿದೆ. ಅಲ್ಲಿ ಕಚೇರಿಗಳನ್ನು ಹೊಂದಿರುವ ಗುಜರಾತಿ ವ್ಯಾಪಾರಿಗಳು ಭಾರತಕ್ಕೆ ಹಿಂತಿರುಗುತ್ತಿದ್ದಾರೆ”. ಹೀಗಾಗಿ ಸೂರತ್ ವಜ್ರ ಉದ್ಯಮವು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಗೆ ಸುಮಾರು ೮,೦೦೦ ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಲಾಗುತ್ತಿದೆ.