210 ಮಂದಿಗೆ ಕೊರೊನಾ : ಬೆಳ್ತಂಗಡಿಯ ಕ್ರೈಸ್ತ ಆಶ್ರಮಕ್ಕೆ ವಿಎಚ್‍ಪಿ ನೆರವು
ಮಂಗಳೂರು : ಬೆಳ್ತಂಗಡಿಯ ನೆರಿಯಾ ಸಿಯೋನ್ ಆಶ್ರಮದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 210 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಹೀಗಾಗಿ ಇಂದು ವಿಎಚ್‍ಪಿ ಕಾರ್ಯಕರ್ತರು ಆಶ್ರಮವನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಿದ್ದಾರೆ.
ಪಿಪಿಇ ಕಿಟ್ ಧರಿಸಿದ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಿಂದಲೇ ಆಶ್ರಮ, ಗೋಶಾಲೆಯನ್ನು ಸ್ಯಾನಿಟೈಸೇಷನ್ ಮಾಡಿದ್ದಾರೆ.
ಅಲ್ಲದೆ ಗೋವುಗಳ ಆಹಾರ ಆರೈಕೆಗೂ ವ್ಯವಸ್ಥೆ ಮಾಡಿದ್ದಾರೆ.
ಈ ಬಗ್ಗೆ ವಿಹೆಚ್ ಪಿ ನೆರಿಯ ಘಟಕದ ಉಪಾಧ್ಯಕ್ಷ ದೀಕ್ಷಿತ್ ನೆರಿಯಾ ಪ್ರತಿಕ್ರಿಯೆ ನೀಡಿದ್ದು, ಸಿಯೋನ್ ಆಶ್ರಮ ಸಹಜ ಸ್ಥಿತಿಗೆ ಬರುವವರೆಗೂ ಈ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.