ಬೆಂಗಳೂರು, ಮೇ 21 : ಈಗಾಗಲೇ ದೇಶದಲ್ಲಿ 4 .೦ ಲಾಕ್ ಡೌನ್ ಜಾರಿಯಾಗಿದೆ. ಆದರೆ ಕೊರೊನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿನೇ ಆಗುತ್ತಿದೆ. ಎಲ್ಲ ದೇಶದಲ್ಲಿ ಕೊರೊನಾ ಹತೋಟಿಗೆ ಬಂದ ಮೇಲೆ ಲಾಕ್ ಡೌನ್ ಸಡಿಲ ಮಾಡಲಾಯಿತು ಆದರೆ ನಮ್ಮ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಲಾಕ್ ಡೌನ್ ಸಡಿಲಿಕೆ ಅಗತ್ಯಕ್ಕಿಂತ ಜಾಸ್ತಿನೇ ಮಾಡಲಾಗಿದೆ.
ಮಾರ್ಚ್ 23 ರಂದು ದೇಶ ವ್ಯಾಪ್ತಿ 21 ದಿನ ಸಂಪೂರ್ಣ ಲಾಕ್ ಡೌನ್ ಜಾರಿ ತರಲಾಯಿತು . ಅನೇಕರು ಇದು ಅಗತ್ಯವಿರಲಿಲ್ಲ ಅನ್ನುವ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದರ ನಡುವೆ ಸರಕಾರ ಬಡ ವರ್ಗಕ್ಕೆ ಅಗತ್ಯ ಆಹಾರ ಮತ್ತು ಹಣಕಾಸಿನ ವ್ಯವಸ್ಥೆ ಕಲ್ಪಿಸಿತು. ಆದರೆ ಅನೇಕ ದಿನ ಗೂಲಿ ನೌಕರರು ಕೆಲಸದ ನಿಮಿತ್ತ ನಗರ ಸೇರಿದವರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿತು. ಅವರು ಸರಿಯಾದ ವ್ಯವಸ್ಥೆ ಇಲ್ಲದೆ ಆಹಾರವು ಸಿಗದೇ ಪರಿತಪಿಸಿದರು. ಅತ್ತ ಊರಿಗೂ ಹೋಗಲು ಆಗದೆ ಸರಕಾರಕ್ಕೆ ಹಿಡಿಶಾಪ ಹಾಕಿದ್ದವರೇ ಜಾಸ್ತಿ . ಆದರೆ ಈಗ ಸೋಂಕಿತರ ಸಂಖ್ಯೆ ಜಾಸ್ತಿ ಆದ ಕಾರಣ ಈ ಸಮಯದಲ್ಲಿ ದಿನಗೂಲಿ ನೌಕರರನ್ನು ಅವರ ಮನೆಗೆ ತಲುಪಿಸುವ ಕಾರ್ಯ ಅನಿವಾರ್ಯವಾದರೂ ಕೊರೊನ ಅನ್ನುವ ಮಹಾಮಾರಿ ಅವರ ಬದುಕನ್ನು ನಾಶಮಾಡುವುದರ ಜೊತೆ ಇತರರಿಗೆ ರೋಗ ಹರಡದಿದ್ದರೆ ಸಾಕು ಎನ್ನುವ ಪರಿಸ್ಥಿತಿ ಉದ್ಬವವಾಗಿದೆ.
ಯಾವುದೆಲ್ಲ ಕ್ರಮ ಕೈಗೊಳ್ಳ ಬಹುದಿತ್ತು ವಲಸೆ ಕಾರ್ಮಿಕರಿಗೆ, ಪರ ಊರಲಿದ್ದ ಜನ ಸಾಮಾನ್ಯರಿಗೆ ತ್ವರಿತ ರೀತಿಯಲ್ಲಿ ಕೊರೊನ ಟೆಸ್ಟ್ ಮಾಡಿ ಅವರವರ ಗ್ರಾಮಗಳಿಗೆ ಕಳುಹಿಸುವ ವ್ಯವಸ್ಥೆ ಸರಕಾರ ಮಾಡಬಹುದಿತ್ತು. ಆದರೆ ಇದನ್ನು ಆ ಸಂದರ್ಭದಲ್ಲಿ ಮಾಡಿರಲಿಲ್ಲ. ಈಗಾಗಲೇ ಅನೇಕರು ಕೊರೊನ ಸೋಂಕಿಗೆ ಒಳಗಾದ ಅನೇಕ ಉದಾಹರಣೆ ಕಣ್ಣ ಮುಂದೆ ಇದೆ.ಹಲವು ದಿನಗಳಿಂದ ಯಾವುದೇ ಕೊರೊನ ಸೋಂಕಿನ ಕೇಸ್ ಇಲ್ಲದ ಜಿಲ್ಲೆಗಳು ಇದೀಗ ಕೊರೊನ ಆರ್ಭಟಕ್ಕೆ ಸಿಲುಕಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಪರಿಣಾಮ ಬೀರಬಹುದು ಅಂತ ಕಾಲನೇ ನಿರ್ಧರಿಸಲಿದೆ.
ಇನ್ನು ದೇಶದ ರಿಸರ್ವ್ ಬ್ಯಾಂಕ್ ರೆಪೋ ಮತ್ತು ಸಿ ಆರ್ ಆರ್ ಕಡಿತ ಮಾಡಿ ಬ್ಯಾಂಕ್ ಗಳ ಸ್ಥಿತಿ ಸುಧಾರಣೆಗೆ ಕ್ರಮ ಕೈಗೊಂಡದ್ದು ಅಷ್ಟಾಗಿ ಪರಿಣಾಮ ಬೀರಲಿಲ್ಲ. ಈ ವ್ಯವಸ್ಥೆಯನ್ನು ಇನ್ನು ಸ್ವಲ್ಪ ದಿನ ಕಾದು ನೋಡಿ ಮಾಡಬಹುದಿತ್ತು ಇನ್ನು ಮಾಸಿಕ ಕಂತಿನ ಮೂರು ತಿಂಗಳ ಮುಂದೂಡಿಕೆ ಮಾಡಿ (ಮಾರ್ಚ್ ನಿಂದ ಮೇ ವರೆಗೆ ) ಎಲ್ಲಾ ಬ್ಯಾಂಕ್ ಗಳಿಗೂ ನಿರ್ದೇಶನ ನೀಡಿತ್ತು. ಆದರೆ ಲಾಕ್ ಡೌನ್ ಶುರು ಆದಾಗ ಹೆಚ್ಚಿನ ಮಾರ್ಚ್ ತಿಂಗಳ ಕಂತು ಬ್ಯಾಂಕ್ ಗಳಿಗೆ ಜಮೆ ಆಗಿತ್ತು. ಆದುದರಿಂದ ಮಾರ್ಚ್ ನಿಂದ ಜಾರಿ ಮಾಡಿದ್ದು ಸಮಂಜಸವೆನಿಸಲಿಲ್ಲ. ಆದರೆ ಬಡ್ಡಿಯ ಮೇಲೆ ಯಾವುದೇ ರಿಯಾಯಿತಿ ನೀಡದ ಕಾರಣ ಇದು ನಂತರದ ದಿನಗಳಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುವುದು ಖಂಡಿತ . ಅನೇಕ ಬ್ಯಾಂಕ್ ಗಳು ಇದರ ಲಾಭವನ್ನು ತನ್ನ ಕಸ್ಟಮರ್ ಗಳಿಗೆ ನೀಡುವಲ್ಲಿ ಮೀನಮೇಷ ಎನಿಸಿತ್ತು.
ಇನ್ನು ಲಾಕ್ ಡೌನ್ 4 .೦ ಮೇ ಕೊನೆಯ ವಾರದ ವರೆಗೆ ವಿಸ್ತರಣೆ ಆದ ಕಾರಣ, ಜೂನ್ ನಲ್ಲಿ ಬರುವ ಕಂತಿನ ಪಾವತಿ ಅಷ್ಟು ಸುಲಭವಲ್ಲ . ಸರ್ಕಾರವು ಅಸಲಿನ ಮೇಲಿನ ಬಡ್ಡಿಯ ಹೊಣೆ ಹೊರುತ್ತಿದ್ದರೆ, ಮಧ್ಯಮ ವರ್ಗದ ಜನಕ್ಕೆ ಅನುಕೂಲ ಆಗುತ್ತಿತ್ತು. ಈಗಾಗಲೇ ರಾಜ್ಯ ಸರಕಾರಗಳು ಒತ್ತಡಕ್ಕೆ ಮಣಿದು ಮತ್ತು ಅನಿವಾರ್ಯವಾಗಿ ಕೆಲವೊಂದು ಸೌಲಭ್ಯವನ್ನು ನೀಡಿ ಲಾಕ್ ಡೌನ್ ಅಗತ್ಯವನ್ನು ಮರೆತಂತೆ ತೋರುತ್ತಿದೆ.
ಪ್ರತಿ ತಾಲ್ಲೂಕು ಮಟ್ಟದಲ್ಲೂ ಸಂಚಾರಿ ವೈದ್ಯಕೀಯ ಸೌಲಭ್ಯ ನೀಡಿದರೆ ಉತ್ತಮ. ಸರಕಾರ ಕೆಲಸವಿಲ್ಲದೇ ಬರಿ ಗೈಯಲ್ಲಿ ತಮ್ಮ ತಮ್ಮ ಹಳ್ಳಿಗೆ ಬಂದ ಕೆಲಸಗಾರರಿಗೆ ಯಾವ ರೀತಿ ಮುಂದಿನ ದಿನಗಳಲ್ಲಿ ಕೆಲಸ ನೀಡಲಿಯೇ ಏನು ಕಾದು ನೋಡಬೇಕಿದೆ. ಮಕ್ಕಳ ಹಿತ ದೃಷ್ಟಿಯಿಂದ ಈ ಸಲ ಶಾಲಾ ಕಾಲೇಜುಗಳ ಆರಂಭವನ್ನು ಕನಿಷ್ಠ ಅಕ್ಟೋಬರ್ ಅಥವಾ ಡಿಸೆಂಬರ್ ವರೆಗೆ ವಿಸ್ತರಣೆ ಮಾಡಿದರೆ ಉತ್ತಮ ಏನಾಗಬಹುದು.
ಕೊರೊನ ಸದ್ಯಕ್ಕೆ ಕೊನೆಯಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಪಟ್ಟಣ ಪ್ರದೇಶದ ಅನೇಕ ಕಾಮಗಾರಿಗಳು ನೆನೆಗುದಿಗೆ ಬೀಳುವ ಸಾಧ್ಯತೆ ಜಾಸ್ತಿ ಇದೆ.
ಹಳ್ಳಿ ಸೇರಿದ ಜನ ಸದ್ಯಕ್ಕೆ ಪಟ್ಟಣದ ಕಡೆ ಮುಖ ಮಾಡುವ ಲಕ್ಷಣ ವಿರಳ. ಇದರಿಂದ ಸರಿಯಾದ ಸಮಯಕ್ಕೆ ಕೆಲಸ ಕಾರ್ಯವಾಗುವುದಿಲ್ಲ. ಇನ್ನು ಐಟಿ ಬಿಟಿ ಕಂಪನಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡಿ ಅನ್ನುವ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಒಂದು ವೇಳೆ ಇದು ಮುಂದುವರೆದರೆ ಹೆಚ್ಚಿನ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಬಹುದು. ಇದರಿಂದ ಉದ್ಯೋಗವನ್ನೇ ಅವಲಂಭಿಸಿರುವ ಅನೇಕ ಕೆಲಸಗಾರರು ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಬಹುದು. ಇನ್ನು ಸಾಲ ಮಾಡಿ ಕಂಪನಿಗಳಿಗೆ ಆಫೀಸ್ ನೀಡಿದ ಅನೇಕರು ಬಾಡಿಗೆ ಸಿಗದೇ ಪರದಾಡಬಹುದು. ಹೋಟೆಲ್ ಉದ್ಯಮ ಮತ್ತು ರಸ್ತೆ ಬದಿ ವ್ಯಾಪಾರಸ್ಥರು ಕೂಡ ಸಂಕಷ್ಟದಿಂದ ಹೊರತಾಗಿಲ್ಲ.
ಈ ಕಂಪೆನಿಯನ್ನೇ ನಂಬಿ ಸಾಲ ಮಾಡಿ ವಾಹನ ಸೌಕರ್ಯ ಒದಗಿಸಿದ ಅನೇಕರು ಸಾಲ ಮರುಪಾವತಿಸದೆ ತೊಂದರೆಗೆ ಸಿಲುಕಬಹುದು. ಸರಕಾರಕ್ಕೆ ಹರಿದು ಬರುತಿದ್ದ ಕೋಟಿ ಕೋಟಿ ರುಪಾಯಿಗೆ ಕತ್ತರಿ ಬೀಳಬಹುದುಒಂದು ವೇಳೆ ಈ ಸ್ಥಿತಿ ಒದಗಿ ಬಂದರೆ ನೇರವಾಗಿ ಬ್ಯಾಂಕ್ ಕ್ಷೇತ್ರದ ಮೇಲೆ ಪರಿಣಾಮ ಬೀರಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಬಹುದು ಒಟ್ಟಿನಲ್ಲಿ ಸರಕಾರದ ಪ್ರತಿ ಹೆಜ್ಜೆಯು ಪ್ರಮುಖವಾಗಿದ್ದು, ಸ್ವಲ್ಪ ವಿಚಲಿತವಾದರೂ ವಿನಾಶಕ್ಕೆ ಅಪಾಯ ಖಂಡಿತ.
– ಶರಣ್ ಕುಮಾರ್ ರೈ