ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೊರೋನಾ, ಸರ್ಕಾರ ಮತ್ತು ಜನರ ಸಮಸ್ಯೆಗಳು…

admin by admin
May 22, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು, ಮೇ 21 : ಈಗಾಗಲೇ ದೇಶದಲ್ಲಿ 4 .೦ ಲಾಕ್ ಡೌನ್ ಜಾರಿಯಾಗಿದೆ. ಆದರೆ ಕೊರೊನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿನೇ ಆಗುತ್ತಿದೆ. ಎಲ್ಲ ದೇಶದಲ್ಲಿ ಕೊರೊನಾ ಹತೋಟಿಗೆ ಬಂದ ಮೇಲೆ ಲಾಕ್ ಡೌನ್ ಸಡಿಲ ಮಾಡಲಾಯಿತು ಆದರೆ ನಮ್ಮ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಲಾಕ್ ಡೌನ್ ಸಡಿಲಿಕೆ ಅಗತ್ಯಕ್ಕಿಂತ ಜಾಸ್ತಿನೇ ಮಾಡಲಾಗಿದೆ.

ಮಾರ್ಚ್ 23 ರಂದು ದೇಶ ವ್ಯಾಪ್ತಿ 21 ದಿನ ಸಂಪೂರ್ಣ ಲಾಕ್ ಡೌನ್ ಜಾರಿ ತರಲಾಯಿತು . ಅನೇಕರು ಇದು ಅಗತ್ಯವಿರಲಿಲ್ಲ ಅನ್ನುವ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದರ ನಡುವೆ ಸರಕಾರ ಬಡ ವರ್ಗಕ್ಕೆ ಅಗತ್ಯ ಆಹಾರ ಮತ್ತು ಹಣಕಾಸಿನ ವ್ಯವಸ್ಥೆ ಕಲ್ಪಿಸಿತು. ಆದರೆ ಅನೇಕ ದಿನ ಗೂಲಿ ನೌಕರರು ಕೆಲಸದ ನಿಮಿತ್ತ ನಗರ ಸೇರಿದವರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿತು. ಅವರು ಸರಿಯಾದ ವ್ಯವಸ್ಥೆ ಇಲ್ಲದೆ ಆಹಾರವು ಸಿಗದೇ ಪರಿತಪಿಸಿದರು. ಅತ್ತ ಊರಿಗೂ ಹೋಗಲು ಆಗದೆ ಸರಕಾರಕ್ಕೆ ಹಿಡಿಶಾಪ ಹಾಕಿದ್ದವರೇ ಜಾಸ್ತಿ . ಆದರೆ ಈಗ ಸೋಂಕಿತರ ಸಂಖ್ಯೆ ಜಾಸ್ತಿ ಆದ ಕಾರಣ ಈ ಸಮಯದಲ್ಲಿ ದಿನಗೂಲಿ ನೌಕರರನ್ನು ಅವರ ಮನೆಗೆ ತಲುಪಿಸುವ ಕಾರ್ಯ ಅನಿವಾರ್ಯವಾದರೂ ಕೊರೊನ ಅನ್ನುವ ಮಹಾಮಾರಿ ಅವರ ಬದುಕನ್ನು ನಾಶಮಾಡುವುದರ ಜೊತೆ ಇತರರಿಗೆ ರೋಗ ಹರಡದಿದ್ದರೆ ಸಾಕು‌ ಎನ್ನುವ ಪರಿಸ್ಥಿತಿ ಉದ್ಬವವಾಗಿದೆ.

Related posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

August 3, 2026
ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

August 3, 2026

ಯಾವುದೆಲ್ಲ ಕ್ರಮ ಕೈಗೊಳ್ಳ ಬಹುದಿತ್ತು ವಲಸೆ ಕಾರ್ಮಿಕರಿಗೆ, ಪರ ಊರಲಿದ್ದ ಜನ ಸಾಮಾನ್ಯರಿಗೆ ತ್ವರಿತ ರೀತಿಯಲ್ಲಿ ಕೊರೊನ ಟೆಸ್ಟ್ ಮಾಡಿ ಅವರವರ ಗ್ರಾಮಗಳಿಗೆ ಕಳುಹಿಸುವ ವ್ಯವಸ್ಥೆ ಸರಕಾರ ಮಾಡಬಹುದಿತ್ತು. ಆದರೆ ಇದನ್ನು ಆ ಸಂದರ್ಭದಲ್ಲಿ ಮಾಡಿರಲಿಲ್ಲ. ಈಗಾಗಲೇ ಅನೇಕರು ಕೊರೊನ ಸೋಂಕಿಗೆ ಒಳಗಾದ ಅನೇಕ ಉದಾಹರಣೆ ಕಣ್ಣ ಮುಂದೆ ಇದೆ.ಹಲವು ದಿನಗಳಿಂದ ಯಾವುದೇ ಕೊರೊನ ಸೋಂಕಿನ ಕೇಸ್ ಇಲ್ಲದ ಜಿಲ್ಲೆಗಳು ಇದೀಗ ಕೊರೊನ ಆರ್ಭಟಕ್ಕೆ ಸಿಲುಕಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಪರಿಣಾಮ ಬೀರಬಹುದು ಅಂತ ಕಾಲನೇ ನಿರ್ಧರಿಸಲಿದೆ.

ಇನ್ನು ದೇಶದ ರಿಸರ್ವ್ ಬ್ಯಾಂಕ್ ರೆಪೋ ಮತ್ತು ಸಿ ಆರ್ ಆರ್ ಕಡಿತ ಮಾಡಿ ಬ್ಯಾಂಕ್ ಗಳ ಸ್ಥಿತಿ ಸುಧಾರಣೆಗೆ ಕ್ರಮ ಕೈಗೊಂಡದ್ದು ಅಷ್ಟಾಗಿ ಪರಿಣಾಮ ಬೀರಲಿಲ್ಲ. ಈ ವ್ಯವಸ್ಥೆಯನ್ನು ಇನ್ನು ಸ್ವಲ್ಪ ದಿನ ಕಾದು ನೋಡಿ ಮಾಡಬಹುದಿತ್ತು ಇನ್ನು ಮಾಸಿಕ ಕಂತಿನ ಮೂರು ತಿಂಗಳ ಮುಂದೂಡಿಕೆ ಮಾಡಿ (ಮಾರ್ಚ್ ನಿಂದ ಮೇ ವರೆಗೆ ) ಎಲ್ಲಾ ಬ್ಯಾಂಕ್ ಗಳಿಗೂ ನಿರ್ದೇಶನ ನೀಡಿತ್ತು. ಆದರೆ ಲಾಕ್ ಡೌನ್ ಶುರು ಆದಾಗ ಹೆಚ್ಚಿನ ಮಾರ್ಚ್ ತಿಂಗಳ ಕಂತು ಬ್ಯಾಂಕ್ ಗಳಿಗೆ ಜಮೆ ಆಗಿತ್ತು. ಆದುದರಿಂದ ಮಾರ್ಚ್ ನಿಂದ ಜಾರಿ ಮಾಡಿದ್ದು ಸಮಂಜಸವೆನಿಸಲಿಲ್ಲ. ಆದರೆ ಬಡ್ಡಿಯ ಮೇಲೆ ಯಾವುದೇ ರಿಯಾಯಿತಿ ನೀಡದ ಕಾರಣ ಇದು ನಂತರದ ದಿನಗಳಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುವುದು ಖಂಡಿತ . ಅನೇಕ ಬ್ಯಾಂಕ್ ಗಳು ಇದರ ಲಾಭವನ್ನು ತನ್ನ ಕಸ್ಟಮರ್ ಗಳಿಗೆ ನೀಡುವಲ್ಲಿ ಮೀನಮೇಷ ಎನಿಸಿತ್ತು.

ಇನ್ನು ಲಾಕ್ ಡೌನ್ 4 .೦ ಮೇ ಕೊನೆಯ ವಾರದ ವರೆಗೆ ವಿಸ್ತರಣೆ ಆದ ಕಾರಣ, ಜೂನ್ ನಲ್ಲಿ ಬರುವ ಕಂತಿನ ಪಾವತಿ ಅಷ್ಟು ಸುಲಭವಲ್ಲ . ಸರ್ಕಾರವು ಅಸಲಿನ ಮೇಲಿನ ಬಡ್ಡಿಯ ಹೊಣೆ ಹೊರುತ್ತಿದ್ದರೆ, ಮಧ್ಯಮ ವರ್ಗದ ಜನಕ್ಕೆ ಅನುಕೂಲ ಆಗುತ್ತಿತ್ತು. ಈಗಾಗಲೇ ರಾಜ್ಯ ಸರಕಾರಗಳು ಒತ್ತಡಕ್ಕೆ ಮಣಿದು ಮತ್ತು ಅನಿವಾರ್ಯವಾಗಿ ಕೆಲವೊಂದು ಸೌಲಭ್ಯವನ್ನು ನೀಡಿ ಲಾಕ್ ಡೌನ್ ಅಗತ್ಯವನ್ನು ಮರೆತಂತೆ ತೋರುತ್ತಿದೆ.

ಪ್ರತಿ ತಾಲ್ಲೂಕು ಮಟ್ಟದಲ್ಲೂ ಸಂಚಾರಿ ವೈದ್ಯಕೀಯ ಸೌಲಭ್ಯ ನೀಡಿದರೆ ಉತ್ತಮ. ಸರಕಾರ ಕೆಲಸವಿಲ್ಲದೇ ಬರಿ ಗೈಯಲ್ಲಿ ತಮ್ಮ ತಮ್ಮ ಹಳ್ಳಿಗೆ ಬಂದ ಕೆಲಸಗಾರರಿಗೆ ಯಾವ ರೀತಿ ಮುಂದಿನ ದಿನಗಳಲ್ಲಿ ಕೆಲಸ ನೀಡಲಿಯೇ ಏನು ಕಾದು ನೋಡಬೇಕಿದೆ. ಮಕ್ಕಳ ಹಿತ ದೃಷ್ಟಿಯಿಂದ ಈ ಸಲ ಶಾಲಾ ಕಾಲೇಜುಗಳ ಆರಂಭವನ್ನು ಕನಿಷ್ಠ ಅಕ್ಟೋಬರ್ ಅಥವಾ ಡಿಸೆಂಬರ್ ವರೆಗೆ ವಿಸ್ತರಣೆ ಮಾಡಿದರೆ ಉತ್ತಮ ಏನಾಗಬಹುದು.

ಕೊರೊನ ಸದ್ಯಕ್ಕೆ ಕೊನೆಯಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಪಟ್ಟಣ ಪ್ರದೇಶದ ಅನೇಕ ಕಾಮಗಾರಿಗಳು ನೆನೆಗುದಿಗೆ ಬೀಳುವ ಸಾಧ್ಯತೆ ಜಾಸ್ತಿ ಇದೆ.
ಹಳ್ಳಿ ಸೇರಿದ ಜನ ಸದ್ಯಕ್ಕೆ ಪಟ್ಟಣದ ಕಡೆ ಮುಖ ಮಾಡುವ ಲಕ್ಷಣ ವಿರಳ. ಇದರಿಂದ ಸರಿಯಾದ ಸಮಯಕ್ಕೆ ಕೆಲಸ ಕಾರ್ಯವಾಗುವುದಿಲ್ಲ.  ಇನ್ನು ಐಟಿ ಬಿಟಿ ಕಂಪನಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡಿ ಅನ್ನುವ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಒಂದು ವೇಳೆ ಇದು ಮುಂದುವರೆದರೆ ಹೆಚ್ಚಿನ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಬಹುದು. ಇದರಿಂದ ಉದ್ಯೋಗವನ್ನೇ ಅವಲಂಭಿಸಿರುವ ಅನೇಕ ಕೆಲಸಗಾರರು ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಬಹುದು.  ಇನ್ನು ಸಾಲ ಮಾಡಿ ಕಂಪನಿಗಳಿಗೆ ಆಫೀಸ್ ನೀಡಿದ ಅನೇಕರು ಬಾಡಿಗೆ ಸಿಗದೇ ಪರದಾಡಬಹುದು. ಹೋಟೆಲ್ ಉದ್ಯಮ ಮತ್ತು ರಸ್ತೆ ಬದಿ ವ್ಯಾಪಾರಸ್ಥರು ಕೂಡ ಸಂಕಷ್ಟದಿಂದ ಹೊರತಾಗಿಲ್ಲ.

ಈ ಕಂಪೆನಿಯನ್ನೇ ನಂಬಿ ಸಾಲ ಮಾಡಿ ವಾಹನ ಸೌಕರ್ಯ ಒದಗಿಸಿದ ಅನೇಕರು ಸಾಲ ಮರುಪಾವತಿಸದೆ ತೊಂದರೆಗೆ ಸಿಲುಕಬಹುದು.  ಸರಕಾರಕ್ಕೆ ಹರಿದು ಬರುತಿದ್ದ ಕೋಟಿ ಕೋಟಿ ರುಪಾಯಿಗೆ ಕತ್ತರಿ ಬೀಳಬಹುದುಒಂದು ವೇಳೆ ಈ ಸ್ಥಿತಿ ಒದಗಿ ಬಂದರೆ ನೇರವಾಗಿ ಬ್ಯಾಂಕ್ ಕ್ಷೇತ್ರದ ಮೇಲೆ ಪರಿಣಾಮ ಬೀರಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಬಹುದು ಒಟ್ಟಿನಲ್ಲಿ ಸರಕಾರದ ಪ್ರತಿ ಹೆಜ್ಜೆಯು ಪ್ರಮುಖವಾಗಿದ್ದು, ಸ್ವಲ್ಪ ವಿಚಲಿತವಾದರೂ ವಿನಾಶಕ್ಕೆ ಅಪಾಯ ಖಂಡಿತ.

– ಶರಣ್ ಕುಮಾರ್ ರೈ

Tags: Lockdown
ShareTweetSendShare
Join us on:

Related Posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

by admin
August 3, 2026
0

ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

by Shwetha
August 3, 2026
0

ಬಿಜೆಪಿಯ ಪ್ರಖರ ವಾಗ್ಮಿ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯ ಪರಿಚಯದ ಪುಟದಿಂದ (Bio) ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಉಲ್ಲೇಖವನ್ನು...

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

by Shwetha
August 3, 2026
0

ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ...

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

by Shwetha
August 3, 2026
0

ಭ್ರಷ್ಟತೆಯಿಂದ ಕೂಡಿದ ಪರೀಕ್ಷಾ ವ್ಯವಸ್ಥೆಯನ್ನು ದೇಶದ ಯುವಜನತೆಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕೇ ಹೊರತು ಅವರಿಗೆ ಕ್ಷಮಾದಾನ ನೀಡುವುದಲ್ಲ ಎಂದು ಕಾಂಗ್ರೆಸ್...

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

by Shwetha
August 3, 2026
0

ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಐದು ವರ್ಷಗಳ ಒಳಗಾಗಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಸರ್ಕಾರವೇ ವಾಪಸ್ ಪಡೆಯುವುದು ಅಥವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram