ಬೆಂಗಳೂರಲ್ಲಿ ಕೊರೊನಾ ಹೆಚ್ಚಳ : ಬಿಬಿಎಂಪಿ ಅಲರ್ಟ್ Corona Increase saaksha tv
ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಲರ್ಟ್ ಆಗಿದ್ದು, ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಅದರ ಭಾಗವಾಗಿ ನಗರದ ಬಿಟಿಎಂ ಲೇಔಟ್, ಕೋರಮಂಗಲ ವಲಯದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾದ ಮನೆಗಳ ಸೀಲ್ ಡೌನ್ ಮಾಡಿದೆ.
ಇಂದು ಅತಿ ಹೆಚ್ಚು ಕೇಸ್ ಪತ್ತೆ ಆಗಿರುವ ಕೋರಮಂಗಲ, ಬಿಟಿಎಂ ಲೇಔಟ್ ನಲ್ಲಿ ಹಲವು ಮನೆಗಳನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ.
ಒಂದೇ ಮನೆಯಲ್ಲಿ 5 ಕ್ಕಿಂತ ಹೆಚ್ಚು ಕೇಸ್ ಪತ್ತೆ ಬೆನ್ನಲ್ಲೇ ಮನೆಗಳನ್ನ ಸೀಲ್ ಮಾಡಲಾಗಿದೆ.
ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಫಂಗಸ್ , ಯೆಲ್ಲೂ, ಹಸರು ಫಂಗಸ್ , ಡೆಲ್ಟಾ , ಲ್ಯಾಂಬ್ಡಾ , ಜಿಕಾ , ಕಪ್ಪಾ ವೈರಸ್ ಆತಂಕ ಜನರನ್ನ ಆತಂಕಕ್ಕೆ ಈಡು ಮಾಡಿದೆ. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.









