ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೊನಾ ಸೋಂಕು
ಸಾವ್ ಪಾಲೊ, ಜುಲೈ 8: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ತನಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಮಂಗಳವಾರ ಹೇಳಿದ್ದಾರೆ, ಟೆಲಿವಿಷನ್ ಸಂದರ್ಶನವೊಂದರಲ್ಲಿ ತಾನು ಜ್ವರದಿಂದ ಬಳಲುತ್ತಿದ್ದರೂ ಆರೋಗ್ಯವಾಗಿದ್ದೇನೆ ಎಂದು ಹೇಳಿದರು. ಕೊರೋನಾ ವೈರಸ್ ಅನ್ನು ಲಘುವಾಗಿ ಪರಿಗಣಿಸಿದ್ದ ಅವರು ಸ್ವಲ್ಪ ಜ್ವರ ವೆಂದು ನಿರ್ಲಕ್ಷ್ಯ ಮಾಡಿದ್ದರು, ಬಳಿಕ ಅವರಿಗೆ ಕೊರೊನಾ ಸೋಂಕಿನ ರೋಗ ಲಕ್ಷಣಗಳು ಹೆಚ್ಚು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಕೋವಿಡ್-19 ಸೋಂಕಿನ ಪರೀಕ್ಷೆಗೆ ಒಳಗಾದರು.
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಕೊರೊನಾ ಸೋಂಕನ್ನು ನಿರ್ಲಕ್ಷಿಸಿ, ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ವಿವಾದಗಳನ್ನು ಸೃಷ್ಟಿ ಮಾಡುತ್ತಾ ಸುದ್ದಿಯಲ್ಲಿದ್ದರು. ಲಾಕ್ ಡೌನ್ ಅನ್ನು ವಿರೋಧಿಸಿದ ಬ್ರೆಜಿಲ್ ಅಧ್ಯಕ್ಷ ಇದರಿಂದ ದೇಶದ ಅರ್ಥಿಕತೆಗೆ ಪೆಟ್ಟು ಎಂದು ಪ್ರತಿಪಾದಿಸಿದ್ದರು.
ಯುಎಸ್ ನಂತರ ಬ್ರೆಜಿಲ್ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳನ್ನು ಹೊಂದಿದೆ.