ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗಿದೆ. ಜನರಲ್ಲಿ ಕ್ಷಣದಿಂದ ಕ್ಷಣಕ್ಕೆ ಆತಂಕ ಮೂಡಿಸಿದೆ. ಹಾಗಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ವದಂತಿಹಳು ಹರಡುತ್ತಿದೆ. ಆದರೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ. ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಸಾರ್ವಜನಿಕರಿಗೆ ಟಿಪ್ಟ್ ನೀಡಿದ್ದಾರೆ. ರಾಜಾಹುಲಿ ಯಡಿಯೂರಪ್ಪನವರ ಟಿಪ್ಸ್ ಇಲ್ಲಿವೆ ನೋಡಿ.
- ಆದಷ್ಟು ಮನೆಯಲ್ಲೇ ಇರಿ, ಅಗತ್ಯ ಇದ್ದರೆ ಮಾತ್ರ ಹೊರಗೆ ಬನ್ನಿ
- ವಿದೇಶಗಳಿಂದ ಹಿಂತಿರುಗಿದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ
- ಜನ ಜಂಗುಳಿಯಿಂದ ದೂರವಿರಿ.
- ಕೈಗಳನ್ನು ಚೆನ್ನಾಗಿ ತೊಳೆಯಿರಿ.
- ಶುದ್ದ ಕುಡಿಯುವ ನೀರನ್ನೇ ಕುಡಿಯಿರಿ.
- ಯಾವುದೇ ದೊಡ್ಡ ಸಮಾವೇಶ, ಸಮಾರಂಭ ಆಯೋಜಿಸಬೇಡಿ
- ಕೆಮ್ಮು, ನೆಗಡಿ, ಜ್ವರ, ಗಂಟಲು ಉರಿಯೂತ ಕಂಡು ಬಂದರೆ ತಕ್ಷಣವೇ ವೈದ್ಯರನ್ನ ಕಾಣಿರಿ
- ಕರೋನಾ ದೃಡಪಟ್ಟರೆ 14 ದಿನ ಪ್ರತ್ಯೇಕವಾಗಿರಿ, ಚಿಕಿತ್ಸೆ ಪಡೆಯಿರಿ
- ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ, ಸರ್ಕಾರದ ಮಾಹಿತಿಯನ್ನಷ್ಟೇ ನಂಬಿ
- ಯಾರೂ ಭಯಭೀತರಾಗಬೇಡಿ, ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ