ನವದೆಹಲಿ : ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 61,537 ಹೊಸ ಕೇಸ್ ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 20,88,612ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 933 ಮಂದಿ ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 42,518ಕ್ಕೆ ಬಂದು ನಿಂತಿದೆ.
ದೇಶದ 20,88,612 ಮಂದಿ ಸೋಂಕಿತರ ಪೈಕಿ ಇದುವರೆಗೂ ಒಟ್ಟು ಗುಣಮುಖರಾದವರ ಸಂಖ್ಯೆ 14,27,006 ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 6,19,088 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.








