ಟಾಲಿವುಡ್ ಸಿನಿರಂಗದ ಖ್ಯಾತ ಹಾಸ್ಯ ನಟರಾದ ಪೃಥ್ವಿರಾಜ್ ಅವರು ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪೃಥ್ವಿರಾಜ್ ಗೆ ಉಸಿರಾಟದ ಸಮಸ್ಯೆ ಸಹ ಉಂಟಾಗಿದೆ. ಉಸಿರಾಟದ ತೊಂದರೆಯಾದ ಪರಿಣಾಮ ಕೊರೊನಾ ಬಂದಿರುವ ಶಂಕೆಯಿಂದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆದ್ರೆ ಮೆಡಿಕಲ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಕೊರೊನಾ ಸೋಂಕು ಇಲ್ಲದೇ ಇರುವುದು ದೃಢವಾಗಿದೆ. ಇನ್ನೂ ಪೃಥ್ವಿ ರಾಜ್ ಅವರು ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜನರ ಹಾರೈಕೆ ಬೇಕೆಂದು ಮನವಿ ಮಾಡಿದ್ದಾರೆ. ಕೊರೊನಾ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದ್ದರೂ ಸಹ ಮುನ್ನೆಚ್ಚರಿಕಾ ಕ್ರಮವಾಗಿ ಅವರು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.ಇನ್ನೂ ಕೆಲ ಪರೀಕ್ಷೆಗಳನ್ನ ನೆಡಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.









