ದಿನಪತ್ರಿಕೆಯ ಬಳಕೆಯಿಂದ ಕೊರೊನಾ ಸೋಂಕು ಹರಡಲು ಸಾಧ್ಯವಿಲ್ಲ ಎಂದು ಆರೋಗ್ಯ ವಲಯದ ತಜ್ಞರು ಸ್ಪಷ್ಟಪಡಿಸಿದ್ದಾರೆ ಎಂದು ವರದಿಗಳು ತಿಳಿಸಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನವರು ದಿನಪತ್ರಿಕೆ, ಪುಸ್ತಕಗಳು ಸೇರಿದಂತೆ ಸಮಾಜದಲ್ಲಿ ನಿತ್ಯ ಬಳಸುವ 400 ವಸ್ತುಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಯಾವ ವಸ್ತುವಿನ ಮೇಲೂ ಕೊರೋನಾ ಸೋಂಕು ಕಂಡು ಬಂದಿಲ್ಲ ಎಂದು ನಿಮ್ಹಾನ್ಸ್ ವೈರಾಲಜಿ ವಿಭಾಗದ ಮುಖ್ಯಸ್ಥ ಡಾ| ರವಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಇಲ್ಲಿಯವರೆಗೆ ವಿದೇಶದಿಂದ ಬಂದವರಿಗೆ ಮತ್ತು ಅವರೊಡನೆ ನೇರ ಸಂಪರ್ಕ ಹೊಂದಿದವರಲ್ಲಿ ಮಾತ್ರ ಕೊರೊನಾ ಸೋಂಕು ಕಂಡು ಬಂದಿದ್ದು, ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಕಿಲ್ಲ. ಕೊರೋನಾ ಸೋಂಕುನ ಬಗ್ಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಸುಳ್ಳು ಸುದ್ದಿಗಳಿಂದ ದೂರವಿರಿ ಎಂದು ಅವರು ಸಲಹೆ ನೀಡಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕು ಸ್ಥಳೀಯ ಮಟ್ಟದಲ್ಲಿ ಹಬ್ಬಿದೆ. ಅದು ಸಮುದಾಯ ಸೋಂಕಾಗಿ ಪರಿವರ್ತನೆಯಾದಾಗ ಮಾತ್ರ ದಿನಬಳಕೆಯ ವಸ್ತುಗಳಿಂದ ಹರಡುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಕೊರೋನಾ ಸೋಂಕು ವಿದೇಶಿ ಪ್ರಯಾಣಿಕರಲ್ಲಿ ಮತ್ತು ಅವರೊಡನೆ ಸಂಪರ್ಕ ಹೊಂದಿದವರಲ್ಲಿ ಕಂಡುಬಂದಿದ್ದು, ಜನ ಸಾಮಾನ್ಯರಿಗೆ ಹರಡಿಲ್ಲ. ದಿನಪತ್ರಿಕೆಗಳು ವಿದೇಶದಿಂದ ಇಲ್ಲಿಗೆ ಬರುತ್ತಿಲ್ಲ, ಆದ್ದರಿಂದ ಪತ್ರಿಕೆ ಬಳಕೆಯಿಂದ ಕೊರೊನಾ ಹರಡದು. ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಸರಕಾರದ ಅಧಿಕೃತ ಆದೇಶಗಳನ್ನು ಪಾಲಿಸಿ ಎಂದು ಡಾ| ರವಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಪ್ಯಾಕೆಟ್, ಪುಸ್ತಕ, ದಿನಪತ್ರಿಕೆ ವಸ್ತುಗಳಿಂದ ಸೋಂಕು ಹರಡಲು ಸಾಧ್ಯವಿಲ್ಲ. ಅನಗತ್ಯ ಆತಂಕ ಬಿಟ್ಟು ಆಗಾಗ್ಗೆ ಮುಖ, ಮೂಗು, ಬಾಯಿ ಮುಟ್ಟಿಕೊಳ್ಳದೆ ಸ್ವಚ್ಛತೆ ಕಾಯ್ದು ಕೊಳ್ಳುವ ಮೂಲಕ ಕೊರೊನಾ ಸೋಂಕಿನಿಂದ ದೂರವಿರಿ ಎಂದು ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ| ಸುದರ್ಶನ್ ಬಲ್ಲಾಳ್ ಹೇಳಿರುವುದಾಗಿ ವರದಿಗಳು ಹೇಳಿದೆ.
ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೀವಾವಧಿ ಶಿಕ್ಷೆ
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಅಪರ ಜಿಲ್ಲಾ ಸತ್ರ ನ್ಯಾಯಾಲಯದ FTSC-1 (ಫಾಸ್ಟ್ ಟ್ರಾಕ್ ವಿಶೇಷ ಕೋರ್ಟ್) ಅಪರಾಧಿ ರಾಜು...