ನವದೆಹಲಿ: ರಾಜಧಾನಿ ದೆಹಲಿಯ (Delhi) ಹಲವು ಪ್ರದೇಶಗಳಲ್ಲಿ ಏಕಾಏಕಿ ಮಳೆಯಾದ ಹಿನ್ನೆಲೆಯಲ್ಲಿ ವಿಷಕಾರಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ.
ರಾಷ್ಟ್ರ ರಾಜಧಾನಿಯ ನೋಯ್ಡಾ, ಗುರುಗ್ರಾಮ, ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆ ಮಳೆಯಾಗಿದೆ. ಹೀಗಾಗಿ ಇದು ಹವಾಮಾನದಲ್ಲಿ ತ್ವರಿತ ಬದಲಾವಣೆಗೆ ಕಾರಣವಾಗಿದೆ. ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 85 ದಾಖಲಾಗಿದೆ. ತೀವ್ರ ವಾಯುಮಾಲಿನ್ಯವನ್ನು ತಗ್ಗಿಸಲು ನವೆಂಬರ್ 20-21 ರಂದು ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರ ಮುಂದಾಗಿತ್ತು.
ಸುರಿದಿರುವ ಮಳೆ ತಾತ್ಕಾಲಿಕ ಪರಿಹಾರ ನೀಡಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ.