ಬೆಂಗಳೂರು : ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರಿಗೆ ಹೆಮ್ಮಾರಿ ಕೊರೊನಾ ಆತಂಕ ಶುರುವಾಗಿದೆ. ರೇವಣ್ಣ ಅವರ, ಪತ್ನಿ ಸಹೋದರಿ ಎಂ.ಎಸ್ ರೋಹಿಣಿ ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರೋಹಿಣಿ ಅವರಿಗೆ ಕೊರೊನಾ ಸೋಂಕಿರುವುದು ದೃಢವಾದ ಹಿನ್ನೆಲೆ ರೇವಣ್ಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ ಇದೀಗ ರೋಹಿಣಿ ಅವರು ಕೊರೊನಾಗೆ ಬಲಿಯಾಗಿದ್ದಾರೆ.
ಇತ್ತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ರೇವಣ್ಣ ಹಾಗೂ ಅವರ ಪುತ್ರ ಸದ್ಯ ಹೋಂ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.








