ಸಂಸತ್ ನ 400 ಸಿಬ್ಬಂದಿಗೆ ಕೊರೊನಾ ಪಾಸಿಟಿವ್..!!
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿದಿನ ಕೊರೊನಾ ಸೊಂಕು ಹೆಚ್ಚುತ್ತಿದ್ದು ಆತಂಕ ಸೃಷ್ಠಿಮಾಡಿದೆ. ಕೊರೊನಾದ ರೂಪಾಂತರ ತಳಿ ಓಮಿಕ್ರೊನ್ ಕೂಡ್ ಬಹಳಷ್ಟು ವೇಗವಾಗಿ ಹರಡುತ್ತಿದೆ. ಸದ್ಯ ನಗರದಲ್ಲಿ 20,000 ಕ್ಕೂ ಹೆಚ್ಚು ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿವೆ.
ಹಾಗೇ ಸಂಸತ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ 400 ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜನವರಿ 6 ಮತ್ತು 7 ರಂದು ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವ್ ಎಂದು ದೃಡಪಟ್ಟಿದೆ. ಸದ್ಯ ಸಕಾರಾತ್ಮಕತೆಯ ದರವು 19.60 ಪ್ರತಿಶತಕ್ಕೆ ಏರಿದೆ.
ಅಲ್ಲದೇ ರಾಜ್ಯಗಳಲ್ಲಿ COVID-19 ಸಾಂಕ್ರಾಮಿಕದ ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ಇದರೊಂದಿಗೆ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದ ದೈನಂದಿನ ಕೊರೊನಾ ಏರಿಕೆ ದರವು ಶೇಕಡಾ 9.28 ಕ್ಕೆ ಏರಿದೆ.