ಮೊರಾರ್ಜಿ ವಸತಿ ಶಾಲೆಯ10 ಮಕ್ಕಳಿಗೆ ಕೊರೊನಾ ಪಾಸಿಟಿವ್….
ವಸತಿ ಶಾಲೆಗಳಲ್ಲಿ ಕರೋನಾ ಸೋಂಕಿಗೆ ತುತ್ತಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ಮಕ್ಕಳಿಗೆ ಕರೋನಾ ಪಾಸಿಟೀವ್ ಬಂದಿದೆ.
ಎರಡು ದಿನದ ಹಿಂದೆ ವಸತಿ ಶಾಲೆಯ 50 ಕ್ಕು ಹೆಚ್ಚು ಮಕ್ಕಳಿಗೆ ಆರೋಗ್ಯ ಇಲಾಖೆ RTPCR ಪರೀಕ್ಷೆ ಮಾಡಿತ್ತು. ಇಂದು ಬಂದ ವರದಿಯಲ್ಲಿ 10 ಮಂದಿ ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.10 ಮಕ್ಕಳಿಗೆ ಕೊರೊನಾ ಪಾಸಿಟಿವ್ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಹಾಸ್ಟೆಲ್ ಕಂಟೇನ್ಮೆಂಟ್ ಜೋನ್ ಎಂದು ಮಾಡಿದೆ.
ಸೋಂಕಿತ ಮಕ್ಕಳನ್ನ ಶಾಲೆಯ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಲಾಗಿದೆ ಎಂದು ಶ್ರೀನಿವಾಸಪುರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಮಾಹಿತಿ ನೀಡಿದ್ದಾರೆ.








