ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಆರ್ಭಟ : ಒಂದೇ ದಿನ 7 ಮಂದಿ ಬಲಿ

1 min read

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೊನಾ ಸ್ಫೋಟವಾಗಿದ್ದು, ಇಂದು ಬರೋಬ್ಬರಿ 229 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಕಿಲ್ಲರ್ ಕೊರೊನಾಗೆ ಇಂದು 7 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಮಹಾಮಾರಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ ಒಟ್ಟು 244ಕ್ಕೇರಿದೆ. ಇಂದು ಮಂಗಳೂರು ತಾಲೂಕಿನ‌133 ಮಂದಿಗೆ ಕೊರೋನಾ ಪಾಸಿಟಿವ್, ಬಂಟ್ವಾಳ 45, ಪುತ್ತೂರು 22, ಬೆಳ್ತಂಗಡಿ 14, ಸುಳ್ಯ 5 ಹಾಗೂ ಹೊರ ಜಿಲ್ಲೆಯಿಂದ ಬಂದ 10 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇಂದು ಬರೋಬ್ಬರಿ 498 ಮಂದಿ ಗುಣಮುಖರಾಗಿದ್ದರೇ ಆಕ್ವೀವ್ ಕೇಸ್ 2,349 ಇದೆ. ಈವರೆಗೂ ಒಟ್ಟು 7,825 ಕೊರೋನಾ ಪಾಸಿಟಿವ್ ಕೇಸ್ ಗಳಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd