ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ ಒಟ್ಟು 42 ಕೊರೊನಾ ಪಾಸಿಟಿವ್ ಕೆಸ್ ಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕು ತಗುಲಿದವರ ಸಂಖ್ಯೆ 1682ಕ್ಕೇರಿದೆ. ಇನ್ನೂ ಜಿಲ್ಲೆಯ ದೈನಂದಿನ ವರದಿ ಪ್ರಕಾರ ಇಂದು ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಒಟ್ಟು 836 ಜನರು ಪರಿಖ್ಷೆಗೊಳಗಾಗಿದ್ದು, 42 ಜನರ ರಿಪೋರ್ಟ್ ಮಾತ್ರ ಪಾಸಿಟಿವ್ ಬಂದಿದೆ.
ಇನ್ನೂ ಜಿಲ್ಲೆಯಲ್ಲಿಂದು 52 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಖರಾದವರ ಸಂಖ್ಯೆ 1248ಕ್ಕೆ ಏರಿಕೆಯಾಗಿದೆ. ಒಟ್ಟು 403 ಸಕ್ರಿಯ ಕೆಸ್ ಗಳು ಇನ್ನೂ ಇವೆ. ಇನ್ನೂ ಇದುವರೆಗೂ ಜಿಲ್ಲೆಯಲ್ಲಿ ಮಹಾಮಾರಿಗೆ 31ಮಂದಿ ಬಲಿಯಾಗಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಪೈಕಿ ಕೊಳ್ಳೇಗಾಲದಲ್ಲಿ 9, ಗುಂಡ್ಲುಪೇಟೆಯಲ್ಲಿ 8, ಚಾಮರಾಜನಗರ ತಾಲೂಕಿನಲ್ಲಿ 22, ಯಳಂದೂರಿನಲ್ಲಿ 2, ಹನೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.