ಆಗ್ರಾ: ವಾಕಿಂಗ್ ಗೆ ಹೋಗಿದ್ದ ವೃದ್ಧೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ನಾಯಿಯ ದಾಳಿಗೆ ವೃದ್ಧೆ ಬಲಿಯಾಗಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ವಾಕಿಂಗ್ ಗೆ ಹೋಗಿದ್ದ ವೃದ್ಧೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ದೃಶ್ಯ ಪಕ್ಕದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೀದಿ ನಾಯಿ ಕೂಗತೊಡಗಿದಾಗ ಆ ವೃದ್ಧೆ ತನ್ನ ದುಪಟ್ಟಾ ಬೀಸಿದ್ದಾರೆ. ಈ ವೇಳೆ ಆ ನಾಯಿಯ ಕೂಗು ಕೇಳಿ ಬೇರೆ ನಾಯಿಗಳೂ ಬಂದಿವೆ. 7 ನಾಯಿಗಳು ಆಕೆಯನ್ನು ಸುತ್ತುವರಿದು ಬಟ್ಟೆ ಎಳೆದು ಕೆಳಗೆ ಬೀಳಿಸಿವೆ. ಆನಂತರ ಕಚ್ಚಿ ವೃದ್ಧೆಯನ್ನು ಗಾಯಗೊಳಿಸಿವೆ.
ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿಗಳ ಅಟ್ಟಹಾಸಕ್ಕೆ ವೃದ್ಧೆ ಪ್ರಾಣ ಕಳೆದುಕೊಂಡಿದ್ದಾರೆ. ಆ ಮಹಿಳೆ ಸಹಾಯಕ್ಕಾಗಿ ಕಿರುಚಾಡಿದರೂ ಯಾರೂ ರಕ್ಷಣೆಗೆ ಮುಂದಾಗಲಿಲ್ಲ. ತೀವ್ರವಾದ ಗಾಯದಿಂದ ವೃದ್ಧೆ ಸಾವನ್ನಪ್ಪಿದ್ದಾರೆ,.
ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್
ರಾಜ್ಯದಲ್ಲಿ ಮಳೆಯ ಅಭಾವ ತಲೆದೂರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರೈತರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ಜಲಾಶಯಗಳಿಂದ ಹರಿಸಲಾಗುತ್ತಿರುವ ನೀರನ್ನು ಕೇವಲ ಕುಡಿಯುವ...








