ಕೊರೊನಾ ರಿಪೋರ್ಟ್ : ನಿನ್ನೆ 1,65,553 ಮಂದಿಗೆ ಸೋಂಕು, 2,76,309 ಮಂದಿ ಡಿಸ್ಚಾರ್ಜ್
ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,65,553 ಕೇಸ್ ಗಳು ಪತ್ತೆಯಾಗಿದ್ದು, 3,460 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ.
ಇದರೊಂದಿಗೆ ಭಾರತದಲ್ಲೀಗ ಸೋಂಕಿತರ ಸಂಖ್ಯೆ 2,78,94,800 ಹಾಗೂ ಮೃತರ ಸಂಖ್ಯೆ 3,25,972ಕ್ಕೆ ಏರಿಕೆಯಾಗಿದೆ.
ಇನ್ನು ಶನಿವಾರ ಒಂದೇ ದಿನದಲ್ಲಿ 2,76,309 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದರೊಂದಿಗೆ ಒಟ್ಟಾರೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 2,54,54,320 ಕ್ಕೆ ಏರಿಕೆಯಾಗಿದೆ.
ಗುಣಮುಖರ ಪ್ರಮಾಣ ಶೇ. 91ಕ್ಕೆ ಏರಿಕೆಯಾಗಿದೆ.