ಕೊರೊನಾ ರಿಪೋರ್ಟ್ Corona Report : ಕಳೆದ 24 ಗಂಟೇಲಿ 58,419 ಕೇಸ್ ಪತ್ತೆ
ನವದೆಹಲಿ : ದೇಶದಲ್ಲಿ 81 ದಿನಗಳ ಬಳಿಕ 60 ಸಾವಿರ ಗಡಿಯಿಂದ ಹೊಸ ಸೋಂಕಿತರ ಸಂಖ್ಯೆ ಕೆಳಗಿಳಿದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 58,419 ಕೇಸ್ ಗಳು ಪತ್ತೆಯಾಗಿವೆ. 1576 ಮಂದಿ ವೈರಸ್ ಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲೀಗ ಸೋಂಕಿತರ ಸಂಖ್ಯೆ 2,98,81,965 ಹಾಗೂ ಮೃತರ ಸಂಖ್ಯೆ 3,86,713ಕ್ಕೆ ಏರಿಕೆಯಾಗಿದೆ.
ಆದರೆ ಒಟ್ಟು ಸೋಂಕಿತರ ಪೈಕಿ 2,87,66,009 ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.96.27 ಕ್ಕೆ ಹೆಚ್ಚಳವಾಗಿದೆ.
ನಿನ್ನೆ 87,619 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೇಶದಲ್ಲಿನ್ನೂ 7,29,243 ಕೊರೊನಾ ಕೇಸ್ ಗಳು ಮಾತ್ರ ಸಕ್ರಿಯವಾಗಿವೆ.









