ನವದೆಹಲಿ: ಭಾರತ ಸೇರಿದಂತೆ ವಿಶ್ಯಾದ್ಯಂತ ಅಂತಾರಾಷ್ಟಿçÃಯ ಯೋಗ ದಿನವನ್ನು ಮನೆಗಳಲ್ಲೇ ಸರಳವಾಗಿ ಆಚರಿಸಲಾಯಿತು. ಮಹಾಮಾರಿ ಕೊರೊನಾ ವಿಶ್ವಕ್ಕೆ ಕಂಟಕ ತಂದಿರುವ ಹಿನ್ನೆಲೆಯಲ್ಲಿ `ಮನೆಯಲ್ಲೇ ಯೋಗ, ಕುಟುಂಬದ ಜತೆ ಯೋಗ’ ಎಂಬುದು ಈ ಬಾರಿಯ ಯೋಗ ದಿನದ ಮಂತ್ರವಾಗಿದೆ.
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಮನೆಗಳಲ್ಲೇ ಯೋಗ ಮಾಡಿ, ಯೋಗದ ಮಹತ್ವ ಸಾರಿದರು.
ಅಂತಾರಾಷ್ಟಿçÃಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ವಿರುದ್ಧ ಹೋರಾಡಲು ಯೋಗ ಪ್ರಮುಖ ಅಸ್ತçವಗಿದೆ ಎಂದು ಹೇಳಿದ್ದಾರೆ.
ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಎಂದು ಶುಭ ಕೋರಿದ ಮೋದಿ, ಇದು ಏಕತೆಯನ್ನು ಆಚರಿಸುವ ದಿನ. ಈ ದಿನ ಸಾರ್ವತ್ರಿಕ ಭ್ರಾತೃತ್ವ ಸಂದೇಶ ಸಾರುವ ದಿನ. ಹೀಗಾಗಿ ನಿತ್ಯವೂ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.
ಯೋಗ ಆರೋಗ್ಯಕರ ವಾತಾವರಣ ಸೃಷ್ಟಿಸಲಿದೆ. ಇದು ಏಕತೆಯ ಶಕ್ತಿ ಎಂದು ಸಾಬೀತಾಗಿದೆ. ಮಾನವೀಯ ಬಂಧಗಳನ್ನು ಮತ್ತಷ್ಟು ಗಾಢವಾಗಿಸುತ್ತದೆ. ಯೋಗಕ್ಕೆ ಯಾವುದೇ ಜಾತಿ, ಧರ್ಮ, ಬಣ್ಣ, ಲಿಂಗ ತಾರತಮ್ಯ ಇಲ್ಲ. ಬದಲಿಗೆ ಎಲ್ಲವನ್ನೂ ಮೀರಿಸುವ ಶಕ್ತಿ ಇದಕ್ಕಿದೆ. ಆದ್ದರಿಂದ ಯಾರು ಬೇಕಾದರೂ ಯೋಗ ಅಭ್ಯಾಸ ಮಾಡಬಹುದು ಎಂದು ತಿಳಿಸಿದರು.
ನಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ರೂಢಿಸಿಕೊಳ್ಳಬೇಕು. ಸಂತೋಷಕರ ದಿನಗಳು ಬರಲು ದೂರವೇನಿಲ್ಲ. ಸದ್ಯದಲ್ಲೇ ಯಶಸ್ಸಿಗೆ ಜಗತ್ತು ಸಾಕ್ಷಿಯಾಗುವ ದಿನಗಳು ಬರಲಿವೆ. ಇದಕ್ಕೆ ಯೋಗ ನೆರವಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊರೋನಾ ವೈರಸ್ ನಿರ್ದಿಷ್ಟವಾಗಿ ನಮ್ಮ ಉಸಿರಾಟದ ವ್ಯವಸ್ಥೆಯನ್ನೇ ಆಕ್ರಮಿಸುತ್ತದೆ. ಉಸಿರಾಟದ ವ್ಯವಸ್ಥೆಯು ಪ್ರಾಣಾಯಾಮದಿಂದಲೇ ಬಲಗೊಳ್ಳುತ್ತದೆ. ಯೋಗವು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ. ಆಸನಗಳು ನಮ್ಮ ದೇಹದ ಶಕ್ತಿ ಮತ್ತು ಚಯಾಪಚಯ ಕ್ರಿಯೆಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮತ್ತೊಮ್ಮೆ ಪುನರುಚ್ಚರಿಸಿದರು.