ಬೆಂಗಳೂರು : ರಾಜ್ಯದಲ್ಲಿ ಕೊರೊನಾಸುರನ ಅಬ್ಬರ ಜೋರಾಗಿದ್ದು, ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 5 ಗಂಟೆಯ ಅವಧಿಯಲ್ಲಿ ಮತ್ತೆ 34 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆ ಕಂಡಿದೆ. ಇಂದು ಒಂದೇ ದಾವಣಗೆರೆ ಜಿಲ್ಲೆಯ 21 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಆಘಾತಕ್ಕೆ ಕಾರಣವಾಗಿದೆ.
ಇಂದು 22 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದನ್ನು ಸೇರಿ, ಒಟ್ಟು 293 ಜನರು ಕೊರೊನಾ ಸೋಂಕು ಮುಕ್ತವಾಗಿದ್ದಾರೆ. ಹೆಮ್ಮಾರಿ ಸೋಂಕಿಗೆ ಒಟ್ಟು 25 ಜನರು ಸಾವನ್ನಪ್ಪಿದ್ದರೆ, ಆತ್ಮಹತ್ಯೆ ಮಾಡಿಕೊಂಡ ಒಬ್ಬ ಸೋಂಕಿತನೂ ಸೇರಿ ಒಟ್ಟು 26 ಸೋಂಕಿತರು ಮೃತಪಟ್ಟಿದ್ದಾರೆ.
ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್ ಪತ್ತೆ
ದಾವಣಗೆರೆ- 21
ಕಲಬುರಗಿ -06
ಬೆಂಗಳೂರು ನಗರ- 04
ಬಾಗಲಕೋಟೆ- 03
ಇಂದು ನಡೆದ ಸ್ಯಾಂಪಲ್ ಟೆಸ್ಟ್ ಗಳ ವರದಿ
ಒಟ್ಟು ಸ್ಯಾಂಪಲ್ ಟೆಸ್ಟ್- 5168
ನೆಗೆಟಿವ್- 4523
ಪಾಸಿಟಿವ್- 34
ಬಾಕಿಯುಳಿದ ಉಳಿದ ವರದಿಗಳು- 611