Corona ಕೊರೊನಾ ಕಾಟ, ಸಾರಿಗೆ ಸೇವೆ ವ್ಯತ್ಯಯ : ಬೆಂಗಳೂರು ವಿವಿ ಪರೀಕ್ಷೆಗಳು ಮುಂದಕ್ಕೆ
ಬೆಂಗಳೂರು : Corona ಕೊರೊನಾ ಎರಡನೇ ಅಲೆಯ ಆರ್ಭಟ, ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಏಪ್ರಿಲ್ 19,20 ಮತ್ತು ಏಪ್ರಿಲ್ 21 ರಿಂದ ಆರಂಭವಾಗಬೇಕಿದ್ದ ಪದವಿ ಹಾಗೂ ಸ್ನಾತಕೋತ್ತರ ವಿವಿಧ ಕೋರ್ಸ್ಗಳ ಪರೀಕ್ಷೆಗಳನ್ನ ಮುಂದೂಡಲಾಗಿದೆ.
ಬೆಂಗಳೂರು ವಿವಿ, ಏಪ್ರಿಲ್ 19 ರಂದು ಬೆಂಗಳೂರು ವಿವಿ ಎಲ್ಲ ಪದವಿ ಕೋರ್ಸ್ಗಳ ಒಂದು ಮತ್ತು ಮೂರನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯಬೇಕಿತ್ತು.
ಹಾಗೆ 20ರಂದು ಸ್ನಾತಕೋತ್ತರ ಕೋಸ್ಗಳಾದ ಎಂಬಿಎ, ಎಂಸಿಎ, ಎಂಇಡಿ, ಎಂಎಸ್ಸಿ, ಏಪ್ರಿಲ್ 21 ರಂದು ಎಂಎ, ಎಸ್ ಎಲ್ ಪಿ, ಎಂಬಿಒಸಿ ಕೋರ್ಸ್ಗಳ ಮೂರನೇ ಸೆಮಿಸ್ಟರ್ ಹಾಗೂ ಎಂಸಿಎ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು.
ಆದ್ರೆ ಕೊರೊನಾ ಕಾಟ, ಸಾರಿಗೆ ಸೇವೆ ವ್ಯತ್ಯಯದಿಂದ ಈ ಪರೀಕ್ಷೆಗಳನ್ನ ಮುಂದೂಡಲಾಗಿದೆ.