ರಾಜ್ಯದಲ್ಲಿ ಇಂದು 35,297 ಮಂದಿಗೆ ಸೋಂಕು, 34,057 ಮಂದಿ ಡಿಸ್ಚಾರ್ಜ್
ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೊನಾ ಅಬ್ಬರ ಮುಂದುವರೆದಿದ್ದು, 35,297 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 344 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 20,88,488 ಕ್ಕೆ ಏರಿಕೆಯಾಗಿದ್ದು, ಈವರೆಗೆ 20,712 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಇಂದು 34,057 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 14,74,678 ಮಂದಿ ಚೇತರಿಸಿಕೊಂಡಿದ್ದರೆ, ರಾಜ್ಯದಲ್ಲಿ 5,93,078 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ 15,191 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 161 ಜನ ಮೃತಪಟ್ಟಿದ್ದಾರೆ. ಬಾಗಲಕೋಟೆ- 520, ಬಳ್ಳಾರಿ- 1865, ಬೆಳಗಾವಿ- 713, ಬೆಂ.ಗ್ರಾಮಾಂತರ -1079, ಬೀದರ್ -257, ಚಾಮರಾಜನಗರ -842, ಚಿಕ್ಕಬಳ್ಳಾಪುರ -354, ಚಿಕ್ಕಮಗಳೂರು -445, ಚಿತ್ರದುರ್ಗ 292, ದ. ಕನ್ನಡ- 812, ದಾವಣಗೆರೆ -494, ಧಾರವಾಡ -737, ಗದಗ -430, ಹಾಸನ -792, ಹಾವೇರಿ- 160, ಕಲಬುರಗಿ- 497, ಕೊಡಗು -425, ಕೋಲಾರ- 488, ಕೊಪ್ಪಳ -437, ಮಂಡ್ಯ -1153, ಮೈಸೂರು -1260, ರಾಯಚೂರು- 170, ರಾಮನಗರ -518, ಶಿವಮೊಗ್ಗ- 880, ತುಮಕೂರು- 1798, ಉಡುಪಿ – 891, ಉ.ಕನ್ನಡ 791, ವಿಜಯಪುರ – 331, ಯಾದಗಿರಿಯಲ್ಲಿ 675 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ