ಕೊರೋನಾ ಹೊಸ ರೂಪಾಂತರದಿಂದ 3ನೇ ಅಲೆ ತೀವ್ರಗೊಳ್ಳುವ ಸಂಭವ – ಮಹಾರಾಷ್ಟ್ರದಲ್ಲಿ ಮೊದಲು ಕಾಣಿಸಿಕೊಳ್ಳುವ ಸಾಧ್ಯತೆ
ಕೊರೋನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯು ನಿಧಾನವಾಗಿ ಕಡಿಮೆಯಾಗುತ್ತದೆ. ಅದೇ ಸಮಯದಲ್ಲಿ, ಸಂಭವನೀಯ ಮೂರನೇ ಅಲೆಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ಮೂರನೇ ಅಲೆಯು ಮಹಾರಾಷ್ಟ್ರದಿಂದ ಪ್ರಾರಂಭವಾಗಬಹುದು ಮತ್ತು ಕೊರೋನಾದ ಹೊಸ ಡೆಲ್ಟಾ ಪ್ಲಸ್ ರೂಪಾಂತರವು ಮೂರನೇ ಅಲೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಸಿದ್ಧತೆಗಳನ್ನು ತೀವ್ರಗೊಳಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪ್ರಮುಖ ಸಭೆಯಲ್ಲಿ ಕೊರೋನಾ ಮೂರನೇ ಅಲೆಯ ಬಗ್ಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿದ್ದಾರೆ. ನಾವು ಎರಡು ಅಲೆಗಳನ್ನು ನೋಡಿದ್ದೇವೆ ಮತ್ತು ನಮ್ಮ ಸಿದ್ಧತೆಗಳನ್ನು ಸಹ ನಾವು ತಿಳಿದಿದ್ದೇವೆ ಎಂದು ಅವರು ಹೇಳಿದ್ದಾರೆ. ಇದೀಗ ಮೂರನೇ ಅಲೆಯ ಅಪಾಯವಿದ್ದು, ಕೊರೋನಾದ ಹೊಸ ಡೆಲ್ಟಾ ಪ್ಲಸ್ ರೂಪಾಂತರವು ಮೂರನೇ ಅಲೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಇದಕ್ಕಾಗಿ ಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ಹಿರಿಯ ವೈದ್ಯರು ಮತ್ತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಔಷಧಿಗಳು ಮತ್ತು ಅಗತ್ಯ ಉಪಕರಣಗಳ ಲಭ್ಯತೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಇದರಿಂದ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಜನರಿಗೆ ಸಮಯೋಚಿತವಾಗಿ ಚಿಕಿತ್ಸೆಯನ್ನು ಒದಗಿಸಬಹುದು ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ, ರಾಜ್ಯದ ಹಿರಿಯ ಆರೋಗ್ಯ ಅಧಿಕಾರಿಗಳು ಸಹ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಆದ್ದರಿಂದ ಈ ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮೂರನೇ ಅಲೆಯೂ ಬಂದರೆ, ಎರಡು ಪಟ್ಟು ಹೆಚ್ಚು ಜನರ ಮೇಲೆ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಮೊದಲ ಅಲೆಯಲ್ಲಿ 19 ಲಕ್ಷ ರೋಗಿಗಳು ಮತ್ತು ಎರಡನೇ ಅಲೆಯಲ್ಲಿ 40 ಲಕ್ಷ ಪ್ರಕರಣಗಳು ವರದಿಯಾಗಿದೆ. ಮೂರನೇ ಅಲೆಯಲ್ಲಿ, ಈ ಸಂಖ್ಯೆ ಈಗಿರುವ ರೋಗಿಗಳಿಗಿಂತ ದ್ವಿಗುಣವಾಗಬಹುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದು ಇದರಲ್ಲಿ 10 ಪ್ರತಿಶತ ಮಕ್ಕಳೂ ಸೇರಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾಂಕ್ರಾಮಿಕ ತಡೆಗಟ್ಟುವಿಕೆಗಾಗಿ ಸ್ಥಾಪಿಸಲಾದ ಕಾರ್ಯಪಡೆಯ ಸದಸ್ಯ ಡಾ.ರಾಹುಲ್ ಪಂಡಿತ್, ಮೂರನೇ ಅಲೆಯನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ. ನಾವು ಕಿಕ್ಕಿರಿದು ಜನ ದಟ್ಟಣೆ ಇರುವ ಸ್ಥಳಗಳನ್ನು ತಪ್ಪಿಸಬೇಕು ಮತ್ತು ಡಬಲ್ ಮಾಸ್ಕ್ ಬಳಸಬೇಕು. ನಾವು ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಮೂರನೇ ಅಲೆಯು ಇನ್ನೂ ತೀವ್ರವಾಗಬಹುದು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊತ್ತಂಬರಿ ರಸ ತಯಾರಿಸುವ ವಿಧಾನ ಮತ್ತು ಅದರ ಪ್ರಯೋಜನಗಳು#corianderjuice #saakshatv #healthtips https://t.co/HALRYUPZdb
— Saaksha TV (@SaakshaTv) June 16, 2021
ಮನೆಯಲ್ಲೇ ಸುಲಭವಾಗಿ ತಯಾರಿಸಿ ಬಟರ್ ನಾನ್#Saakshatv #cookingrecipe #homemade #butter https://t.co/x2exmxmjuH
— Saaksha TV (@SaakshaTv) June 16, 2021
ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಹಾಗಿದ್ದರೆ ಅದನ್ನು ಸುಲಭವಾಗಿ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ#download #pancard https://t.co/dseCciimAf
— Saaksha TV (@SaakshaTv) June 17, 2021
ಏನಿದು ವೇತನ (Salary) ಖಾತೆ? ಇದರ ಪ್ರಯೋಜನಗಳೇನು?#salaryaccount https://t.co/LCCPGdQUTA
— Saaksha TV (@SaakshaTv) June 16, 2021
#Coronavariant #thirdwave #corona