ದೇಶದಲ್ಲಿ ನಿಲ್ಲದ ಕೊರೊನಾ ಮರಣಕೇಕೆ : ಕಳೆದ 24 ಗಂಟೇಲಿ 4454 ಬಲಿ
ನವದೆಹಲಿ : ದೇಶದಲ್ಲಿ ಕೊರೊನಾ ಮರಣಕೇಕೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 4454 ಮಂದಿ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,22,315 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 4454 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3 ಲಕ್ಷ ಗಡಿ ದಾಟಿದೆ.
ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,67,52,447ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 3,03,720ಕ್ಕೆ ಜಿಗಿದಿದೆ.
ಇನ್ನು ನಿನ್ನೆ ಒಂದೇ ದಿನದಲ್ಲಿ 3,02,544 ಮಂದಿ ಗುಣಮುಖತರಾಗಿದ್ದು, ಒಟ್ಟಾರೆ ಗುಣಮುಖತರ ಸಂಖ್ಯೆ 2,37,28,011ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ್ನೂ 27,20,716 ಸಕ್ರಿಯ ಪ್ರಕರಣಗಳಿವೆ.










