Covid: ಜಗತ್ತಿಗೆ ಮತ್ತೆ ತೆಲೆನೋವಾದ ಚೀನಾ

1 min read
China Saaksha Tv

 ಜಗತ್ತಿಗೆ ಮತ್ತೆ ತೆಲೆನೋವಾದ ಚೀನಾ

ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ.

ಚೇನಾದಲ್ಲಿ ಮೊದಲ ಅಲೆಯ ಸಂದರ್ಭದಲ್ಲಿ ವರದಿಯಾಗಿದ್ದ ಸಂಖ್ಯೆಗಿಂತಲೂ ಇಂದು ವರದಿಯಾಗಿರುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕ ತಂದೊಂಡಿದೆ. ಚೀನಾದ 12ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ರೂಪಾಂತರಿ ವ್ಯಾಪಕವಾಗಿ ಹರಡುತ್ತಿದೆ.

‘ಪ್ರಸ್ತುತ ದೇಶದಲ್ಲಿ ರೋಗಲಕ್ಷಣಗಳಿರುವ 1,455 ಸೋಂಕಿತರಿದ್ದಾರೆ. 11,691 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೂ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಸೋಂಕಿನಿಂದ ಸಾವನ್ನಪ್ಪಿರುವ ಸಂಖ್ಯೆಯೂ ವರದಿಯಾಗಿಲ್ಲ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHC) ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನೂ ಚೀನಾದ ಆರ್ಥಿಕ ರಾಜಧಾನಿ ಶಾಂಘೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ನಗರದ ಸುಮಾರು  2.5 ಕೋಟಿ ನಿವಾಸಿಗಳು ಇದೀಗ ಲಾಕ್​ಡೌನ್​ ನಿರ್ಬಂಧದ ಅಡಿಯಲ್ಲಿದ್ದು, ಮನೆಗಳಲ್ಲಿಯೇ ಉಳಿದಿದ್ದಾರೆ. ಇಂದು ಭಾನುವಾರ ಶಾಂಘೈನಲ್ಲಿ 8,200 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇದು ದೇಶದ ಒಟ್ಟು ಸೋಂಕಿತರ ಪೈಕಿ ಇದು ಶೇ 70ರಷ್ಟು ಪ್ರಮಾಣವಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd