ಯುವಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತ್ತಿರುವ ಕೊರೊನಾ ಸೋಂಕು Shaaksha Tv
ಬೆಂಗಳೂರು: ಕೊರೊನಾ ಮಹಾಮಾರಿ ಮತ್ತೆ ಭಯಾನಕವಾಗಿ ಹರಡುತ್ತಿದೆ. ಇದು ರಾಜ್ಯದ ಜನರನ್ನು ಭಯ ಹೆಚ್ಚು ಮಾಡಿದೆ. ಮೂರನೇ ಅಲೆಯಲ್ಲಿ 36,90 ಸಾವಿರ ಜನ ಸೊಂಕಿತರು ಪತ್ತೆಯಾಗಿದ್ದು. ಇದರಲ್ಲಿ 20 ಸಾವಿರ ಯುವಕರಿಗೆ ಕೊರೊನಾ ಸೋಂಕು ತಗುಲಿದೆ. ಈ ಯುವಕರು 19-39 ವಯಸ್ಸಿನ ಒಳಗಿನವರಾಗಿದ್ದಾರೆ.
ನಿತ್ಯ ಸಾವಿರಕ್ಕೂ ಅಧಿಕ ಯುವಕರಿಗೆ ಸೋಂಕು ತಗಲುತ್ತಿದ್ದು ಕಳೆದ 5 ದಿನದಲ್ಲಿ 8 ಸಾವಿರ ಯುವಕರಿಗೆ ಸೋಂಕು ದೃಢವಾಗಿದೆ. ನಿನ್ನೆ ಒಂದೇ ದಿನ 12,000 ಕೇಸ್ ಕರ್ನಾಟಕ ರಾಜ್ಯದಲ್ಲಿ ಪತ್ತೆಯಾಗಿದೆ. ಬೆಂಗಳೂರಿನಲ್ಲಿಯೇ 9,020 ಜನರಿಗೆ ಸೊಂಕು ಪತ್ತೆಯಾಗಿದೆ. ಒಟ್ಟು ಸಕ್ರಿಯ ಕೇಸ್ ಗಳ ಸಂಖ್ಯೆ 49, 602ಕ್ಕೆ ಹೆಚ್ಚಿದೆ. ಕೊರೊನಾ ಸೋಂಕಿಗೆ ನಿನ್ನೆ ರಾಜ್ಯದಲ್ಲಿ ನಾಲ್ಕು ಜನ ಬಲಿಯಾಗಿದ್ದು, ರಾಜ್ಯದ ಕೊವಿಡ್ ಪಾಸಿಟಿವಿಟಿ ದರ 6.33ಕ್ಕೆ ಏರಿಕೆ ಕಂಡಿದೆ. ಬೆಂಗಳೂರಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 10.53ರಷ್ಠಿದೆ.