ಯಾದಗಿರಿ : ಕೊರೊನಾ ನಿಯಮ ಉಲ್ಲಂಘಿಸಿ ಗ್ರಾಮದೇವತೆ ಜಾತ್ರೆ..!
ಯಾದಗಿರಿ : ಕೊರೊನಾ ಚೈನ್ ಬ್ರೇಕ್ ಮಾಡಲು ರಾಜ್ಯ ಸರ್ಕಾರ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ.
ಎಲ್ಲೂ ಜನ ಸೇರಬಾರದು ಎಂದು ಪದೇ ಪದೇ ಮನವಿ ಮಾಡಿಕೊಳ್ಳುತ್ತಿದೆ. ಆದರೂ ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಅದ್ದೂರಿಯಾಗಿ ಗ್ರಾಮದೇವತೆ ಜಾತ್ರೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಅದ್ಧೂರಿಯಾಗಿ ಜಾತ್ರೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಗ್ರಾಮದೇವತೆ ಜಾತ್ರೆಯಲ್ಲಿ ಸಾವಿರಾರು ಜನ ಯಾವುದೇ ಮಾಸ್ಕ್,ಸಾಮಾಜಿಕ ಅಂತರ ವಿಲ್ಲದೇ ಭಾಗಿಯಾಗಿದ್ದರು.
ಗ್ರಾಮದೇವತೆ ಜಾತ್ರಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಜಾತ್ರೆಯಲ್ಲಿ ಸಾವಿರಾರು ಜನ ಸೇರಿಸಿದ್ರೂ ಕೂಡ ತಡೆಗಟ್ಟಲು ಜಿಲ್ಲಾಡಳಿತ ವಿಫಲವಾಗಿದೆ ಎಂಬೋದು ಗೋತ್ತಾಗುತ್ತಿದೆ.