ಬೀಜಿಂಗ್ ನಲ್ಲಿ ಕೊರೊನಾ ಎರಡನೇ ಅಲೆ
ಬೀಜಿಂಗ್, ಜೂನ್ 26: ಹೊಸ ಕೋವಿಡ್ -19 ಪ್ರಕರಣಗಳು ಏಕಾಏಕಿ ಬೀಜಿಂಗ್ನಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಮುಖ ನಗರಗಳಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ಬಂಧಿಸಿದ್ದು, ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.
ಲಾಕ್ ಡೌನ್ ಸಡಿಲಿಕೆ ಬಳಿಕ, ಚೀನಾದ ರಾಜಧಾನಿಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಿ ಬಿಡಲಾಗುತ್ತಿತ್ತು.
ಈಗ, ಕೊರೋನ ವೈರಸ್ ಸೋಂಕಿನ ಎರಡನೇ ಅಲೆಗೆ 249 ಜನರು ಒಳಗಾಗಿದ್ದಾರೆ. ಸುಮಾರು ಎರಡು ತಿಂಗಳವರೆಗೆ ಬೀಜಿಂಗ್ ನಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ, ಅನಂತರ ಜೂನ್ 11 ರ ಆಸುಪಾಸಿನಲ್ಲಿ ಸೋಂಕು ಪ್ರಕರಣಗಳು ಬೀಜಿಂಗ್ನ ನೈರುತ್ಯ ದಿಕ್ಕಿನಲ್ಲಿರುವ ಕ್ಸಿನ್ಫಾಡಿ ಸಗಟು ಆಹಾರ ಕೇಂದ್ರದೊಂದಿಗೆ ಸಂಪರ್ಕ ಹೊಂದಿದವರಲ್ಲಿ ಕಂಡು ಬಂದಿತ್ತು.
ಬೀಜಿಂಗ್ ವುಹಾನ್ ಗಿಂತ ದೊಡ್ಡದಾಗಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ತುಂಬಾ ಕಷ್ಟಕರವಾಗಿರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದರಿಂದಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಾನಿ ಬಹಳಷ್ಟು ಹೆಚ್ಚಿರಬಹುದು ಎಂದು ಹೇಳಿದ್ದಾರೆ..
ಲಾಕ್ ಡೌನ್ ತೆರವು ಬಳಿಕ ಜನರು ರೆಸ್ಟೊರೆಂಟ್ಗೆ ಬರಲು ಆರಂಭಿಸಿದ್ದು, ಇದೀಗ 2ನೇ ಅಲೆಯ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪುನಃ ವ್ಯಾಪಾರಗಳು ಸಂಪೂರ್ಣ ಇಳಿಮುಖವಾಗಿದೆ ಎಂದು ಹೇಳಲಾಗಿದೆ.