ನವದೆಹಲಿ : (Coronavirus India) ಭಾರತದಲ್ಲಿ ಕೊರೊನಾ ರಣಾರ್ಭಟ ಮುಂದುವರಿದಿದ್ದು, ಇದೀಗ ದೇಶದಲ್ಲಿ ಒಟ್ಟು ಕೊರೊನಾ (Coronavirus India) ಸೋಂಕಿತರ ಸಂಖ್ಯೆ 67 ಲಕ್ಷದ ಗಡಿದಾಟಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 72,049 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 986 ಸೋಂಕಿತರು ಸಾವನ್ನಪ್ಪಿದ್ದಾರೆ.
ಇದರೊಂದಿಗೆ ದೇಶದ ಒಟ್ಟು ಕೋವಿಡ್ -19 ಸೋಂಕಿತರ ಸಂಖ್ಯೆ 67,57,132ಕ್ಕೆ ಹೆಮ್ಮಾರಿಗೆ 1,04,555 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ದೇಶದ ಒಟ್ಟು 67,57,132 ಕೊರೊನಾ ಸೋಂಕಿತರ ಪೈಕಿ 67,57,132 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನೂ ಓದಿ : ಬ್ಯಾಂಕ್ ಖಾತೆಯಿಂದ ಸದ್ದಿಲ್ಲದೆ ಹಣ ಕದಿಯುವ 34 ಮಾಲ್‌ವೇರ್ ಸೋಂಕಿತ ಆ್ಯಪ್ ಗಳ ಪಟ್ಟಿ ಇಲ್ಲಿದೆ
ಇನ್ನು ಉಳಿದಂತೆ ದೇಶದಲ್ಲಿ 9,07,883 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಇದುವರೆಗೂ 8,22,71,657 ಮಂದಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ.
ರಾಜ್ಯಗಳ ವಿಚಾರಕ್ಕೆ ಬಂದ್ರೆ ಮಹಾರಾಷ್ಟ್ರದಲ್ಲಿ 14,65,911 ಕೊರೊನಾ ಕೇಸ್ ಗಳು ದೃಢಪಟ್ಟಿವೆ.
ಆಂಧ್ರ ಪ್ರದೇಶದಲ್ಲಿ (7,29,307), ಕರ್ನಾಟಕ (6,57,705), ತಮಿಳುನಾಡು(6,30,408) ಮತ್ತು ಉತ್ತರ ಪ್ರದೇಶ (4,20,937) ಕೊರೊನಾ ಪೀಡಿತ ರಾಜ್ಯಗಳ ಪೈಕಿ ಮೊದಲ ಐದು ಸ್ಥಾನದಲ್ಲಿವೆ.
ಅರಿಶಿನ ಹಾಲು, ಚ್ಯವನ್ಪ್ರಶ್, ಯೋಗ – ಲಘು, ಲಕ್ಷಣರಹಿತ ಕೋವಿಡ್ ಪ್ರಕರಣಗಳಿಗೆ ಆಯುಷ್ ಸಚಿವಾಲಯದ ಪ್ರೋಟೋಕಾಲ್
ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ನಿನ್ನೆ 10,228 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ.
ನಿನ್ನೆ ರಾಜ್ಯದಲ್ಲಿ 9,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 91 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,57,705ಕ್ಕೆ ಕೊರೊನಾಗೆ ಬಲಿಯಾದವರ ಸಂಖ್ಯೆ 9,461ಕ್ಕೆ ಬಂದು ನಿಂತಿದೆ.
ಇನ್ನು ಒಟ್ಟು 6,57,705 ಸೋಂಕಿತರ ಪೈಕಿ ರಾಜ್ಯದಲ್ಲಿನ್ನು 1,15,151 ಸಕ್ರಿಯ ಪ್ರಕರಣಗಳಾಗಿದ್ದು, 5,33,074 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 848 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.










