ಕಾರ್ತಿ ಚಿದಂಬರಂಗೆ ಕೊರೋನಾ ಸೋಂಕು
ಚೆನ್ನೈ, ಅಗಸ್ಟ್ 3: ಕಾರ್ತಿ ಚಿದಂಬರಂ ಅವರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದೆ. ಸೋಮವಾರ ಕೋವಿಡ್-19 ಪರೀಕ್ಷೆಗೆ ನಾನು ಒಳಗಾದೆ ಹಾಗೂ ವರದಿಯಲ್ಲಿ ನನಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಲಘುವಾಗಿ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ವೈದ್ಯಕೀಯ ಸಲಹೆಯ ಮೇರೆಗೆ ಅವರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ನನಗೆ # ಕೋವಿಡ್ ಸೋಂಕು ದೃಢಪಟ್ಟಿದೆ. ನನ್ನ ರೋಗಲಕ್ಷಣಗಳು ಲಘುವಾಗಿವೆ ಮತ್ತು ವೈದ್ಯಕೀಯ ಸಲಹೆಯ ಪ್ರಕಾರ ನಾನು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರಿಗೂ ವೈದ್ಯಕೀಯ ಪ್ರೋಟೋಕಾಲ್ ಅನುಸರಿಸಲು ನಾನು ಒತ್ತಾಯಿಸುತ್ತೇನೆ ಎಂದು ಕಾರ್ತಿ ಟ್ವೀಟ್ ಮಾಡಿದ್ದಾರೆ.