ಹುಬ್ಬಳ್ಳಿ: ಛೋಟಾ ಮುಂಬಯಿ ಎಂದೇ ಖ್ಯಾತವಾಗಿರುವ ನಗರದಲ್ಲಿ ಇತ್ತೀಚೆಗೆ ಅಪರಾಧಗಳು ಹೆಚ್ಚಾಗುತ್ತಿದ್ದು, ರಿಯಲ್ ಎಸ್ಟೇಟ್ ಬ್ರೋಕರ್ ಮೇಲೆ ಕಾಂಗ್ರೆಸ್ ಕಾರ್ಪೋರೇಟರ್ ಸಹೋದರ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಮಹಿಳೆ ಎಂದು ಕೂಡ ನೋಡದೆ ನಾಲ್ಕೈದು ರೌಡಿಗಳೊಂದಿಗೆ ಸೇರಿ ಥಳಿಸಿದ್ದಾನೆ ಎನ್ನಲಾಗಿದೆ. ತಾಲೂಕಿನ ಬಿಡ್ನಾಳದಲ್ಲಿ ಈ ಪ್ರಕರಣ ನಡೆದಿದ್ದು, ರಿಯಲ್ ಎಸ್ಟೇಟ್ ಬ್ರೋಕರ್ ಗುರುಸಿದ್ದಪ್ಪ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ರೌಡಿ ಶೀಟರ್ ಶಿವರಾಜ್ ಗೌರಿ ಹಾಗೂ ಸಹಚರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಶಿವರಾಜ್ ಗೌರಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಾಗರಾಜ್ ಗೌರಿ ಸಹೋದರನಾಗಿದ್ದಾನೆ.
ಗುರುಸಿದ್ದಪ್ಪರನ್ನು ಬಿಡಿಸಲು ಬಂದ ಪತ್ನಿ ಹಾಗೂ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎನ್ಲನಾಗಿದೆ. ಮಗಳು ಅನ್ನಪೂರ್ಣ ಬಟ್ಟೆ ಹರಿದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ರೌಡಿ ಶೀಟರ್ ಶಿವರಾಜ್, ತುಷಾರ್, ಅಜರುದ್ದೀನ್ ಎಂಬವರ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.