ಕೌಂಟಿ ಕ್ರಿಕೆಟ್ ನಲ್ಲಿ ಮೂರನೇ ದ್ವಿಶತಕ – 100 ವರ್ಷಗಳ ನಂತರ ಇತಿಹಾಸ ಸೃಷ್ಟಿಸಿದ ಭಾರತ
ಭಾರತೀಯ ಕ್ರಿಕೆಟಿಕಗೆ ಚೇತೇಶರ ಪೂಜಾರ ಕೌಂಟಿ ಕ್ರಿಕೆಟ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಬುಧವಾರ ಮಿಡ್ಲ್ಸೆಕ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಸೆಕ್ಸ್ ತಂಡದ ಪರ ಈ ಋತುವಿನ ಮೂರನೇ ದ್ವಿಶತಕವನ್ನ ದಾಖಲಿಸಿದ್ದಾರೆ. ಇದರೊಂದಿಗೆ, 108 ವರ್ಷಗಳ ನಂತರ ಸಸೆಕ್ಸ್ಗಾಗಿ ಒಂದು ಋತುವಿನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ನ ಕಾಶಿ ಲಾರ್ಡ್ಸ್ನಲ್ಲಿ ನಡೆದ ಯಾವುದೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪೂಜಾರ 403 ಎಸೆತಗಳಲ್ಲಿ 231 ರನ್ ಸಿಡಿಸಿದರು. ಟಾಮ್ ಹೇನ್ಸ್ ಗಾಯಗೊಂಡಿರುವ ಕಾರಣ ಈ ಪಂದ್ಯದಲ್ಲಿ ತಂಡದ ನಾಯಕನ ಜವಬ್ದಾರಿಯನ್ನೂ ಹೊತ್ತಿದ್ದಾರೆ. ಇದು ಸಸೆಕ್ಸ್ ನಾಯಕನಾಗಿ ಪೂಜಾರ ಅವರ ಮೊದಲ ದ್ವಿಶತಕವಾಗಿದೆ. ಈ ಋತುವಿನ ಆರಂಭದಲ್ಲಿ ಪೂಜಾರ 387 ಎಸೆತಗಳಲ್ಲಿ ಅಜೇಯ 201 ಮತ್ತು 334 ಎಸೆತಗಳಲ್ಲಿ 203 ರನ್ ಗಳಿಸಿದ್ದರು.
ಕೌಂಟಿ ಕ್ರಿಕೆಟ್ ಆಧಾರದ ಮೇಲೆ ಪೂಜಾರ ಟೆಸ್ಟ್ ತಂಡಕ್ಕೆ ಮರಳಿದ್ದರು. ಕಳಪೆ ಪ್ರದರ್ಶನದ ಕಾರಣ ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆದ ಸರಣಿಯಿಂದ ಪೂಜಾರ ಅವರನ್ನು ಕೈಬಿಡಲಾಗಿತ್ತು. ತಂಡದಿಂದ ಕೈಬಿಟ್ಟ ನಂತರ ಕೌಂಟಿಯಲ್ಲಿ ಸಸೆಕ್ಸ್ ಪರ ಆಡುವಾಗ ಪೂಜಾರ ಅದ್ಭುತ ಪ್ರದರ್ಶನ ನೀಡಿದರು. ಅದರ ನಂತರ ತಂಡವು ಇಂಗ್ಲೆಂಡ್ ವಿರುದ್ಧ ಮರು ನಿಗದಿತ ಟೆಸ್ಟ್ ಗೆ ಚಾನ್ಸ್ ಪಡೆದರು.
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪೂಜಾರ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದಾಗ್ಯೂ, ಅವರು ಎರಡನೇ ಇನ್ನಿಂಗ್ಸ್ನಲ್ಲಿ 168 ಎಸೆತಗಳಲ್ಲಿ 66 ರನ್ ಗಳಿಸಿದರು, ನಂತರ ಅವರು ಮತ್ತೊಮ್ಮೆ ತಮ್ಮ ಕೌಂಟಿ ತಂಡವಾದ ಸಸೆಕ್ಸ್ಗೆ ಸೇರಿಕೊಂಡರು ಮತ್ತು ಮೊದಲ ಪಂದ್ಯದಲ್ಲಿ 46 ರನ್ಗಳಿಗೆ ಔಟಾದರು.
ಈ ಋತುವಿನಲ್ಲಿ 5ನೇ ಶತಕ
ಪೂಜಾರ ಈ ಋತುವಿನಲ್ಲಿ 5ನೇ ಶತಕ ದಾಖಲಿಸಿದ್ದಾರೆ. ಸಸೆಕ್ಸ್ ಪರ ಆಡುತ್ತಿರುವ ಪೂಜಾರ ಈ ಋತುವಿನಲ್ಲಿ 7 ಪಂದ್ಯಗಳಲ್ಲಿ 950ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಡರ್ಬಿಶೈರ್ ವಿರುದ್ಧ ದ್ವಿಶತಕದೊಂದಿಗೆ ಸಸೆಕ್ಸ್ ಪರ ಆಟ ಪ್ರಾರಂಭಿಸಿದರು, ನಂತರ ವೋರ್ಸೆಸ್ಟರ್ಶೈರ್ ವಿರುದ್ಧ ಶತಕ ಮತ್ತು ಡರ್ಹಾಮ್ ವಿರುದ್ಧ ದ್ವಿಶತಕವನ್ನು ಗಳಿಸಿದರು. ಮೇ ತಿಂಗಳಲ್ಲಿ, ಅವರು ಮಿಡ್ಲ್ಸೆಕ್ಸ್ ವಿರುದ್ಧ ಅಜೇಯ 170 ರನ್ ಗಳಿಸಿದರು.








