“ಕೋವ್ಯಾಕ್ಸಿನ್ ಔಟ್ ಆಫ್ ಸ್ಟಾಕ್” : ಸರ್ಕಾರಕ್ಕೆ ಹಿಡಿಶಾಪ ಹಾಕಿದ ಬೆಳಗಾವಿ ಮಂದಿ
ಬೆಳಗಾವಿ : ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದ್ದು, ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅದರಂತೆ ಬೆಳಗಾವಿಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಖಾಲಿಯಾಗಿದ್ದು, ಬಿಮ್ಸ್ ಆಡಳಿತ ಮಂಡಳಿ ಲಸಿಕಾ ಕೇಂದ್ರದ ಹೊರಗಡೆ ‘ಕೋವ್ಯಾಕ್ಸಿನ್ ಔಟ್ ಆಫ್ ಸ್ಟಾಕ್’ ಎಂದು ಸೂಚನಾ ಪತ್ರ ಅಂಟಿಸಿದೆ.
ಇದರಿಂದ ದೂರದ ಊರುಗಳಿಂದ ಲಸಿಕೆ ಪಡೆಯಲು ಬಂದವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 19,290 ಲಸಿಕೆಗಳ ಸಂಗ್ರಹವಿದ್ದು, 1690 ಕೋವ್ಯಾಕ್ಸಿನ್, 17,600 ಕೋವಿಶಿಲ್ಡ್ ಲಸಿಕೆಗಳಿವೆ.
ಆದರೂ ಬೀಮ್ಸ್ ಸಿಬ್ಬಂದಿ ಕೋವ್ಯಾಕ್ಸಿನ್ ಲಸಿಕೆ ನೋ ಸ್ಟಾಕ್ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಇದೇ ರೀತಿ ಆಗುತ್ತಿದೆ ಅಂತೆ. ಇದರಿಂದ ಎರಡನೇ ಡೋಸ್ ಪಡೆಯಲು ಬಂದವರು ಲಸಿಕೆ ಸಿಗದೆ ವಾಪಸ್ ತೆರಳುತ್ತಿದ್ದಾರೆ.
ಲಾಕ್ಡೌನ್ ಟೈಂನಲ್ಲಿ ಹೇಗೋ ಪೊಲೀಸರಲ್ಲಿ ಮನವಿ ಮಾಡಿ ದೂರದ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಬಂದ್ರೆ ಈಗ ಲಸಿಕೆ ಇಲ್ಲ ಅಂದ್ರೆ ನಾವೇನು ಮಾಡೋದು ಅಂತಾ ಅಳಲು ತೋಡಿಕೊಂಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಗೆ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.