ವೈಲ್ಡ್ ಟಸ್ಕರ್ ಸಂಸ್ಥೆ ವತಿಯಿಂದ ಗುತ್ತಿಗೆ ಕಾವಾಡಿಗಳಿಗೆ ಆಹಾರದ ಕಿಟ್ ವಿತರಣೆ

1 min read

‘ವೈಲ್ಡ್ ಟಸ್ಕರ್ ಸಂಸ್ಥೆ ವತಿಯಿಂದ ಗುತ್ತಿಗೆ ಕಾವಾಡಿಗಳಿಗೆ ಆಹಾರದ ಕಿಟ್ ವಿತರಣೆ’

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ವಿವಿಧ ಕ್ಷೇತ್ರಗಳಲ್ಲಿ ತೊಂದರೆಗೊಳದಾವರಿಗೆ ವಿವಿಧ ಸಂಘಸಂಸ್ಥೆಗಳು ಹಾಗು ಸರ್ಕಾರ ಪೂರಕವಾಗಿ ಸ್ಪಂಧಿಸುತ್ತಿದೆ. ಆದರೆ ಜೀವವನ್ನು ಪಣಕ್ಕಿಟ್ಟು ಪ್ರತಿದಿನ ಆನೆಗಳೊಂದಿಗೆ ಕರ್ತವ್ಯ ನಿರ್ವಹಿಸುವ ಮಾವುತ ಕಾವಾಡಿಗಳನ್ನು ಸರ್ಕಾರ ಕಡೆಗಣಿಸಿದಂತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಗುತ್ತಿಗೆ ಕಾವಾಡಿಗಳು ಸಂಕಷ್ಟದಲ್ಲಿದ್ದಾರೆ. ಆನೆ ಸಿಬ್ಬಂದಿಗಳ ಸಮಸ್ಯೆ ಅರಿತಿರುವ ವೈಲ್ಡ್ ಟಸ್ಕರ್ ಸಂಸ್ಥೆ ಕಾವಾಡಿಗಳಿಗೆ ಆಹಾರದ ಕಿಟ್ ವಿತರಿಸುವ ಮೂಲಕ ನೈತಿಕ ಸ್ಥೈರ್ಯ ತುಂಬಿದೆ. ಇಂದು ಸೆಕ್ರೆಬೈಲು ಆನೆ ಬಿಡಾರದಲ್ಲಿ ವೈಲ್ಡ್ ಟಸ್ಕರ್ ಸಂಸ್ಥೆ ಮೊದಲ ಹಂತದಲ್ಲಿ ಗುತ್ತಿಗೆ ಕಾವಾಡಿಗಳಿಗೆ ಆಹಾರದ ಕಿಟ್ ಹಾಗು ತರಕಾರಿಯ ಕಿಟ್ ನೀಡಿತು.

ಸಂಸ್ಥೆಯ ಗೌರವ ಟ್ರಸ್ಟಿ ಎಂ. ಶ್ರೀಕಾಂತ್ ಹಾಗು ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಸಿಬ್ಬಂದಿಗಳಿಗೆ ಕಿಟ್ ವಿತರಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್  ಅವರು ಕಾಡಿನ ಮಕ್ಕಳು ಪ್ರತಿದಿನ ಜೀವನದ ಹಂಗು ತೊರೆದು ಆನೆಗಳ ಮೇಲೆ ಕೆಲಸ ಮಾಡುತ್ತಾರೆ. ಪ್ರತಿದಿನವೂ ಅವರಿಗೆ ಸವಾಲಿನ ಕೆಲಸ ಸಕ್ರೆಬೈಲು ಬಿಡಾರದ ಜೊತೆ ಶಿವಮೊಗ್ಗ ಪತ್ರಕರ್ತರು ಒಡನಾಟ ಹೊಂದಿದ್ದು, ಇಲ್ಲಿ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆ ಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಆನೆ ಸಿಬ್ಬಂದಿಗಳು ಕರ್ತವ್ಯದಲ್ಲಿ ಮಡಿದರೆ ಅವರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಸೂಕ್ತ ಕೆಲಸದ ಭದ್ರತೆ ಇಲ್ಲ. ಇಂತಹ ಸಂದರ್ಭದಲ್ಲಿ ಕೊರೊನಾ ಸಂಕಷ್ಟ ಕಾಲ. ಬಡವರಿಗೆ ಹಾಗು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಹಲವು ಸಂಘಸಂಸ್ಥೆಗಳು ಸ್ಪಂಧಿಸುತ್ತಿವೆ. ಆದರೆ ಈವರೆಗೂ ಮಾವುತ ಕಾವಾಡಿಗಳ ನೆರವಿಗೆ ಯಾರು ಮುಂದೆ ಬರಲವಿಲ್ಲ. ಆದರೆ ವೈಲ್ಡ್ ಟಸ್ಕರ್ ಸಂಸ್ಥೆ ಆನೆ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆ ಅರಿತು ಮೊದಲ ಹಂತವಾಗಿ ಅವರಿಗೆ ಆಹಾರದ ಕಿಟ್  ವಿತರಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಮುಂದೆಯೂ ಸಂಸ್ಥೆ ಆನೆ ಸಿಬ್ಬಂದಿಗಳ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಿ ಎಂದು ಹೇಳಿದರು.

ಸಂಸ್ಥೆಯ ಗೌರವ ಟ್ರಸ್ಟಿಯಾಗಿರುವ ಎಂ. ಶ್ರೀಕಾಂತ್ ಮಾತನಾಡಿ, ಸರ್ಕಾರ ಘೋಷಣೆ ಮಾಡಿರುವ 500 ಕೋಟಿ ಬಜೇಟ್ ನಲ್ಲಿ ಮಾವುತ ಕಾವಾಡಿಗಳನ್ನು ಕಡೆಗಣಿಸಿರುವುದು ವಿಪರ್ಯಾಸ ಎಂದು ಹೇಳಿದರು. ಅವರು ಕೂಡ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅರಣ್ಯ ಸಿಬ್ಬಂದಿಗಳನ್ನು ಪ್ರೆಂಟ್ ಲೈನ್ ವಾರಿಯರ್ಸ್ ಗಳೆಂದು ಪರಿಗಣಿಸಿ,ಅವರಿಗೂ ಉಚಿತ ಕೊರೊನಾ ಲಸಿಕೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ವೈಲ್ಡ್ ಟಸ್ಕರ್ ಸಂಸ್ಥೆಯ ನಿರ್ದೇಶಕರಾದ ಜೇಸುದಾಸ್ ಮಾತನಾಡಿ, ಸಂಸ್ಥೆ ಮಾವುತ ಕಾವಾಡಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸ ಮಾಡುತ್ತಿದೆ. ಅವರ ಸಾಂಪ್ರಾದಾಯಿಕ ಪದ್ಥತಿಗಳನ್ನು ದೃಷ್ಯ ಹಾಗು ಅಕ್ಷರ ರೂಪದಲ್ಲಿ ದಾಖಲಿಸುತ್ತಿದೆ.ಸರ್ಕಾರ ಮಾವುತ ಕಾವಾಡಿಗಳಿಗೂ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಆನೆ ಸಿಬ್ಬಂದಿಗಳಿಗೆ ಆಹಾರದ ಕಿಟ್ ನೀಡಲು ನೆರವು ನೀಡಿದ ಎಂ. ಶ್ರೀಕಾಂತ್, ಸಂತೋಷ್ ಕುಮಾರ್ ನಡುಬೆಟ್ಟ, ಡಾಕ್ಟರ್ ಈರಣ್ಣ, ಹಾಗು ಜ್ಞಾನೇಶ್ ತೆಗ್ಗಿನ ಮಠ ಅವರ  ಸಹಕಾರಕ್ಕೆ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd