ADVERTISEMENT
Monday, March 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಡ್ರಗ್ಸ್ ನಶೆಯಲ್ಲಿ ಮಾಯವಾದ ಕೊರೊನಾ, ಡಿಜೆಕೆಜಿ ಗಲಾಟೆ ಮತ್ತು ವಿಜಯೇಂದ್ರ ವಿರುದ್ಧ ಆರೋಪ

admin by admin
September 3, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಇದೇನ್ ಸ್ವಾಮಿ ಕೊರೊನಾ ರಾಜ್ಯದಿಂದ ಓಡಿ ಹೋಗ್ಬಿತ್ತಾ..? ಅರ್ರೆ ಈಗ ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ಎಲ್ಲಾ ಕೂಲ್ ಆಗಿದ್ಯಾ..? ಹೌದು.. ಸಿಎಂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕೇಳಿಬಂದ ಭ್ರಷ್ಟಚಾರದ ಆರೋಪ ಏನಾಯ್ತು..?

ಸದ್ಯ ನನ್ನ ತಲೆಯಲ್ಲಿ ಗಿರಗಿಟ್ಟಲೇ ಹೊಡೆಯುತ್ತಿರುವ ಪ್ರಶ್ನೆಗಳಿವು. ಹೆಮ್ಮಾರಿ ಕೊರೊನಾ ವೈರಸ್ ಎಲ್ಲರ ಬದುಕುಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೀವ ಉಳಿದರೂ ಮುಂದಿನ ಜೀವನ ಹೇಗಪ್ಪಾ ಎಂದು ಯೋಚಿಸುತ್ತ ಕುಳಿತ್ತಿದ್ದಾರೆ. ದೇಶದ ವಿಷಯಕ್ಕೆ ಬಂದ್ರೆ ಗಲ್ಲಿ ಗಲ್ಲಿಗಳಲ್ಲೂ ಮಹಾಮಾರಿ ಆರ್ಭಟಿಸುತ್ತಿದೆ. ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಇತರೆ ದೇಶಗಳನ್ನು ಹಿಂದಿಕ್ಕಿ ಭಾರತ ಮುನ್ನಗ್ಗುತ್ತಿದೆ. ಇನ್ನು ಕೊರೊನಾದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯೂ ಸಂಪೂರ್ಣವಾಗಿ ಕುಸಿದಿದೆ. ಆದ್ರೆ ಯಾರೊಬ್ಬರು ಇದರ ಬಗ್ಗೆ ಮಾತನಾಡುತ್ತಿಲ್ಲ.. ಇದನ್ನು ಪ್ರಶ್ನಿಸಿ ವಾಚ್ ಡಾಗ್ ಆಗಿ ಕೆಲಸ ಮಾಡಬೇಕಿದ್ದ ಹೆಸರಾಂತ ಸುದ್ದಿ ವಾಹಿನಿಗಳು ಟಿಆರ್ ಪಿ ರೇಸ್ ನಲ್ಲಿ ಕುದುರೆಗಳಂತೆ ಓಡುತ್ತಿವೆ.

Related posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

March 29, 2026
ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

March 29, 2026

ಆರಂಭದ ಶೂರತ್ವ

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಅಧಿಕಾರದ ಗದ್ದುಗೆಯಲ್ಲಿ ವಿರಾಜಮಾನವಾಗಿ ಕುಳಿತಿದ್ದ ‘ರಾಜ’ಕಾರಣಿಗಳು ಯುದ್ಧ ಸೇನಾನಿಗಳಂತೆ ಹೆಮ್ಮಾರಿ ವಿರುದ್ಧ ಹೋರಾಟಕ್ಕೆ ನಿಂತರು. ಹಿಂದೆ ಮುಂದೆ ಯೋಜಿಸದೇ ಇತರ ದೇಶಗಳ ಮಾದರಿಗಳನ್ನು ಹಾಗೂ ತಮಗೆ ತೋಚಿದ ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರು. ಇದರಿಂದ ಆರಂಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂತು, ಆದ್ರೆ ಮುಂದೆ ಆಗಿದ್ದೇನು..? ಕೊರೊನಾ ಸ್ಫೋಟ.. ಕೊರೊನಾ ಜೊತೆ ಬದುಕಬೇಕು ಎಂದು ಹೇಳುತ್ತಾ ತೆಗೆದುಕೊಂಡ ಕೆಲ ಆತುರದ ನಿರ್ಧಾರಗಳು ಈಗ ಜನರನ್ನು ಸಾವಿನಂಚಿನಲ್ಲಿ ನಿಲ್ಲಿಸಿವೆ.

ಇನ್ನು ರಾಜ್ಯದ ವಿಚಾರಕ್ಕೆ ಬಂದ್ರೆ ಆರಂಭದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಇಡೀ ದೇಶಕ್ಕೆ ಮಾದರಿ ಆಗಿತ್ತು. ರಾಜಾಹುಲಿ ತೆಗೆದುಕೊಂಡ ಗಟ್ಟಿ ಗುಂಡಿಗೆಯ ನಿರ್ಧಾರಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾದವು. ಆದ್ರೆ ಕಾಲ ಕಳೆದಂತೆ ರಾಜಾಹುಲಿ ಸರ್ಕಾರ ಮಂಕಾಯಿತು. ಪರಿಣಾಮ ಲಾಟರಿ ಸಚಿವರು ಕೊರೊನಾ ಹೆಸರಲ್ಲಿ ಹಣದ ಲೂಟಿಗೆ ಮುಂದಾದರು. ಕೊವೀಡ್ ರಾಜ್ಯದಲ್ಲಿ ವ್ಯಾಪಾರವಾಯಿತು.

ಎಲ್ಲೋದ್ರಿ ಸ್ವಾಮಿ..?

ಆರಂಭದಲ್ಲಿ ಎದೆ ಉಬ್ಬಿಸಿ ಕೊರೊನಾ ವಿರುದ್ಧ ಯುದ್ಧ ಸಾರಿದ ಸಚಿವರು ಈಗ ಸೈಲಂಟ್ ಆಗಿದ್ದಾರೆ. ಕೊರೊನಾ ವೇಗಕ್ಕೆ ಬ್ರೇಕ್ ಹಾಕಲು ಆಗದೇ ವಿಷ್ಯಾಂತರ ಮಾಡುತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಮಾಡಿದ 2000 ಕೋಟಿ ಅವ್ಯವಹಾರ ಆರೋಪ ಸರ್ಕಾರಕ್ಕೆ ಭಾರಿ ಮುಜುಗರವನ್ನುಂಟು ಮಾಡಿತು. ಇದರಿಂದ ತಪ್ಪಿಸಿಕೊಳ್ಳಲು ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕೊರೊನಾ ವಿರುದ್ಧ ಯುದ್ಧವನ್ನು ಅರ್ಧದಲ್ಲೇ ಕೈಬಿಟ್ಟು, ವಿಪಕ್ಷಗಳ ವಿರುದ್ಧ ಸಮರ ಸಾರಿದರು. ಈಗ ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಜನರಿಗೆ ಮುಂದಿನ ದಾರಿ ತೋಚದೆ ಶೂನ್ಯ ಮನಸ್ಸಿನಲ್ಲಿ ಮಂಕಾಗಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮಗೆ ವೋಟು ಹಾಕಿದವರ ಜೊತೆ ನಿಲ್ಲದೇ ಎಲ್ಲಿ ಅಡಗಿದ್ದಾರಾ ಜನ ನಾಯಕರೇ..?

ಡಿಜೆಹಳ್ಳಿ ಕೆಜೆಹಳ್ಳಿ ಗಲಭೆ ಪ್ರಕರಣ ಏನಾಯ್ತು..?

ಬೆಂಗಳೂರಿನ ಡಿಜೆಹಳ್ಳಿ ಕೆಜಿಹಳ್ಳಿಯಲ್ಲಿ ನಡೆದ ಗಲಭೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತು. ಈ ಪ್ರಕರಣ ಇಡೀ ರಾಜ್ಯದ ಗಮನ ಸೆಳೆಯಿತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದಂತೆ ಇದ್ದ ರಾಜ್ಯ ಸರ್ಕಾರದ ಸಚಿವರು ಕೊರೊನಾವನ್ನು ಗಾಳಿಗೆ ತೂರಿ, ಕೇವಲ ಈ ಗಲಭೆಯ ಬಗ್ಗೆ ಮಾತನಾಡುವುದನ್ನೇ ಕೆಲಸವಾಗಿಸಿಕೊಂಡರು. ಅನವಶ್ಯಕ ಹೇಳಿಕೆಗಳನ್ನು ನೀಡುತ್ತ ಪ್ರಕರಣಗಳನ್ನು ಪ್ರಚಾರದ ವಸ್ತುವಾಗಿಸಿಕೊಂಡರು. ಆದರೂ ತಪ್ಪಿಸ್ಥರಿಗೆ ಶಿಕ್ಷೆ ಖಚಿತ ಎಂದ ಸಚಿವರು ಈಗ ಎಲ್ಲೋಗಿದ್ದಾರೋ ಗೊತ್ತಿಲ್ಲ.. ಪ್ರಕರಣದ ತನಿಖೆ ಏನಾಯ್ತೋ ಆ ದೇವರೇ ಬಲ್ಲ.

ಮರಿ ರಾಜಾಹುಲಿ ಮೇಲೆ ಬಂದ ಭ್ರಷ್ಟಾಚಾರ ಸುದ್ದಿ ಆಗಿಲ್ಲ ಯಾಕೆ?

ಕೊರೊನಾ ವೈರಸ್ ಅನ್ನು ಮರೆಸುವಂತೆ ಡಿಜೆ ಹಳ್ಳಿ ಗಲಭೆಯ ಭಜನೆ ಮಾಡಿದ ಬಿಜೆಪಿಯ ಲಾಟರಿ ಸಚಿವರು ಬಿ.ವೈ.ವಿಜಯೇಂದ್ರ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪದ ಬಗ್ಗೆ ತುಟಿಬಿಚ್ಚಲಿಲ್ಲ ಯಾಕೆ..? ಸರ್ಕಾರದ ವಿರುದ್ಧ ಯಾರಾದರೂ ಆರೋಪ ಮಾಡಿದರೇ ಕದನಕಲಿಗಳಂತೆ ಗಂಟೆಗಟ್ಟಲೇ ಭಾಷಣ ಬಿಗಿಯುತ್ತ ತಮ್ಮನ್ನ ಸಮರ್ಥಿಸಿಕೊಳ್ಳುವ ನಾಯಕರು ಈ ವಿಚಾರದ ಬಗ್ಗೆ ಉಸಿರು ಬಿಡಲಿಲ್ಲ ಯಾಕೆ..?

ಡ್ರಗ್ ಮತ್ತಿನಲ್ಲಿ ಕೊರೊನಾ, ಡಿಜೆಕೆ ಪ್ರಕರಣ ಮಂಗಮಾಯ

ಕಳೆದ ತಿಂಗಳ ಡಿಜೆ ಹಳ್ಳಿ ಗಲಭೆ ಪ್ರಕರಣದ ಬೆನ್ನಲ್ಲೆ ಈ ತಿಂಗಳ ಆರಂಭದಲ್ಲಿ ಬೆಳಕಿಗೆ ಬಂದ ಡ್ರಗ್ ಮಾಫಿಯಾ ಸಾಮಾನ್ಯವಾಗಿ ರಾಜ್ಯದ ಜನರ ಗಮನ ಸೆಳೆದಿದೆ. ಅಂದಹಾಗೆ ಕಳೆದ ತಿಂಗಳು ಅಂದರೆ ಆಗಸ್ಟ್ ನಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ ಅಕ್ಷರಶಃ ಅಬ್ಬರಿಸಿ ಬೊಬ್ಬಿಸಿದೆ. ಒಂದೇ ತಿಂಗಳಿನಲ್ಲಿ ಅಂದಾಜು 1 ಲಕ್ಷ ಕೊರೊನಾ ಕೇಸ್ ಗಳು ದೃಢಪಟ್ಟಿವೆ. ಆದ್ರೆ ಈ ವಿಷಯದ ಬಗ್ಗೆ ಘನತೆಹೊತ್ತ ಸಚಿವರು ಆಡಳಿತ ಪಕ್ಷದ ನಾಯಕರು, ವಿಪಕ್ಷ ನಾಯಕರು ಯಾರು ಸಹ ಧ್ವನಿ ಎತ್ತಲಿಲ್ಲ. ಕೇವಲ ರಾಜಕೀಯ ಕೆಸರೆರಚಾಟ ಮಾಡಿಕೊಳ್ಳುತ್ತ ಸೋಂಕಿನಿಂದ ಮೃತಪಟ್ಟವರ ಚಿತೆಯಲ್ಲಿ ತಮ್ಮ ರಾಜಕೀಯ ಬೇಳೆಗಳನ್ನು ಬೇವಿಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ನಮ್ಮ ದೌರ್ಭಾಗ್ಯ..

 

ಮಹೇಶ್ ಎಂ ದಂಡು ಸಾಕ್ಷಾ ಟಿವಿ

Tags: #Bangalore riotsCOVID-19Drug Mafiavijayendra
ShareTweetSendShare
Join us on:

Related Posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

by Shwetha
March 29, 2026
0

ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

by Shwetha
March 29, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ಇಸ್ರೇಲ್ ಪ್ರವಾಸದ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್...

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ –  ಸುರೇಶ್ ಕುಮಾರ್

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ – ಸುರೇಶ್ ಕುಮಾರ್

by Shwetha
March 29, 2026
0

ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಆತಂಕ ಹಾಗೂ ಶ್ರದ್ಧೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತರಾತುರಿಯ ದಿಢೀರ್...

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ  : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

by Shwetha
March 29, 2026
0

ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ...

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

by Shwetha
March 29, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram